‘ತಂದೆಯ ಗೆಲುವು, ಸೋಲು ನೋಡಿ ನಾನು ಕಲಿತ ಪಾಠ ದೊಡ್ಡದು’; ದ್ವಾರಕೀಶ್ ಮಗ ಯೋಗಿ

‘ತಂದೆಯ ಗೆಲುವು, ಸೋಲು ನೋಡಿ ನಾನು ಕಲಿತ ಪಾಠ ದೊಡ್ಡದು’; ದ್ವಾರಕೀಶ್ ಮಗ ಯೋಗಿ

Mangala RR
| Updated By: ರಾಜೇಶ್ ದುಗ್ಗುಮನೆ

Updated on: Apr 17, 2024 | 7:28 AM

ದ್ವಾರಕೀಶ್ ಅವರು ಸಕ್ಸಸ್ ಹಾಗೂ ಫೇಲ್ಯೂವರ್ ಎರಡನ್ನೂ ಕಂಡಿದ್ದಾರೆ. ಅವರು ಎರಡನ್ನೂ ಸಾಮಾನ್ಯವಾಗಿ ತೆಗೆದುಕೊಳ್ಳುತ್ತಿದ್ದರಂತೆ. ‘ಸಿನಿಮಾ ಗೆಲ್ಲಿಸೋದು ಬಿಡೋದು ಜನರಿಗೆ ಬಿಟ್ಟ ವಿಚಾರ. ಇಷ್ಟ ಆದರೆ ಅವರೇ ಸಿನಿಮಾ ಗೆಲ್ಲಿಸುತ್ತಾರೆ’ ಎಂದು ದ್ವಾರಕೀಶ್ ಆಗಾಗ ಹೇಳುತ್ತಾ ಇರುತ್ತಿದ್ದರಂತೆ. ಅವರಿಲ್ಲ ಎನ್ನುವುದು ಬೇಸರದ ವಿಚಾರ.

ದ್ವಾರಕೀಶ್ (Dwarakish) ಅವರು ಸಿನಿಮಾ ರಂಗದಲ್ಲಿ ಸಾಕಷ್ಟು ದೊಡ್ಡ ಗೆಲುವು ಕಂಡಿದ್ದಾರೆ. ಅದೇ ರೀತಿ ಸೋಲನ್ನೂ ನೋಡಿದ್ದಾರೆ. ಈಗ ಅವರು ನಮ್ಮ ಜೊತೆಗಿಲ್ಲ ಅನ್ನೋದು ಬೇಸರದ ವಿಚಾರ. ಅವರ ಮಗ ಯೋಗಿ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ದ್ವಾರಕೀಶ್ ಅವರನ್ನು ನೋಡಿ ಸಾಕಷ್ಟು ವಿಚಾರಗಳನ್ನು ಕಲಿತಿರುವುದಾಗಿ ಯೋಗಿ ಹೇಳಿದ್ದಾರೆ. ‘ಅವರು ನನಗೆ ಏನೂ ಹೇಳ್ತಾ ಇರಲಿಲ್ಲ. ಸಕ್ಸಸ್ ಆದಾಗ, ಫೇಲ್​ ಆದಾಗ ಒಂದೇ ರೀತಿ ಇರುತ್ತಿದ್ದರು. ಸಕ್ಸಸ್​ನ ತಲೆಗೆ ತಗೋ ಬಾರದು, ಫೇಲ್ಯೂವರ್​ನ ಎದೆಗೆ ತಗೋ ಬಾರದು. ತಂದೆ ನೋಡಿ ನಾನು ಇದನ್ನು ಹೇಳಿದ್ದೆ. ಇದನ್ನೇ ಅನೇಕರು ಕಾಪಿ ಮಾಡಿದ್ದಾರೆ. ಗೆಲುವು, ಸೋಲು ಕಾಯಿನ್​ನ ಎರಡು ಮುಖ ಇದ್ದಂತೆ. ನಮಗೆ ಯಾವುದೂ ಮ್ಯಾಟರ್ ಆಗಲ್ಲ. ಗೆಲ್ಲಿಸೋದು ಬಿಡೋದು ಜನರಿಗೆ ಬಿಟ್ಟ ವಿಚಾರ. ಇಷ್ಟ ಆದರೆ ಅವರೇ ಸಿನಿಮಾ ಗೆಲ್ಲಿಸುತ್ತಾರೆ ಎಂದು ತಂದೆ ಹೇಳುತ್ತಿದ್ದರು’ ಎಂದಿದ್ದಾರೆ ಯೋಗಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ