Siddaramaiah: ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದಾಗ ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎದ್ದುನಿಂತು ಕೈಕುಲುಕಿದರು!
ಸ್ವಲ್ಪ ದೂರದಲ್ಲಿ ಕುಳಿತಿದ್ದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಎದ್ದುಬಂದು, ಸಿದ್ದರಾಮಯ್ಯನವರಿಗೆ ವಿಶ್ ಮಾಡುತ್ತಾ ಕೈಕುಲುಕುತ್ತಾರೆ.
ಬೆಂಗಳೂರು: ಸದನದಲ್ಲಿ ಇಂದು ಕಲಾಪ ಶುರುವಾದ ಬಳಿಕ ವರುಣಾ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸದನದೊಳಗೆ ಅವರು ತಮ್ಮ ಎಂದಿನ ರಾಜಗಾಂಭೀರ್ಯದಲ್ಲಿ ಆಗಮಿಸುತ್ತಿದ್ದಂತೆಯೇ ಅದಾಗಲೇ ಸದನದಲ್ಲಿ ಕುಳಿತಿದ್ದ ಸದಸ್ಯರು ಎದ್ದು ನಿಂತಿ ಗೌರವಿಸುತ್ತಾರೆ. ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಹ ಎದ್ದು ನಿಂತು ಕೈಕುಲುಕುತ್ತಾರೆ. ಸ್ವಲ್ಪ ದೂರದಲ್ಲಿ ಕುಳಿತಿದ್ದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಎದ್ದುಬಂದು ಸಿದ್ದರಾಮಯ್ಯನವರಿಗೆ ವಿಶ್ ಮಾಡುತ್ತಾ ಕೈಕುಲುಕುತ್ತಾರೆ. ಸಂಪುಟ ದರ್ಜೆ ಸಚಿವನಾಗಿ ಅಧಿಕಾರವಹಿಸಿಕೊಂಡಿರುವ ದೇವನಹಳ್ಳಿ ಶಾಸಕ ಕೆಹೆಚ್ ಮುನಿಯಪ್ಪ ಮುಖ್ಯಮಂತ್ರಿಗಳ ಜೊತೆ ಸುಮಾರು ಹೊತ್ತು ಗಹನವಾಗಿ ಮಾತುಕತೆ ನಡೆಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

