ಮೊದಲು ಪ್ರಶಸ್ತಿಗಳನ್ನು ವಾಪಸ್ಸು ಮಾಡುತ್ತಿದ್ದರು ಈಗ ಸೈಟು ಹಿಂತಿರುಗಿಸುವ ಅಭಿಯಾನ!: ಯತ್ನಾಳ್

|

Updated on: Oct 21, 2024 | 3:41 PM

ಶಿವಾನಂದ ಪಾಟೀಲ್, ಈಶ್ವರ್ ಖಂಡ್ರೆ ಮತ್ತು ಪ್ರಿಯಾಂಕ್ ಖರ್ಗೆ-ತ್ರಿಮೂರ್ತಿಗಳು ಸೇರಿ ಚಿಂಚೋಳಿ ಬಳಿಯಿರುವ ತನ್ನ ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದಾರೆ ಎಂದು ಹೇಳಿದ ಯತ್ನಾಳ್ ಅವರೆಲ್ಲ ಏನೇ ಮಾತಾಡುವುದಿದ್ದರೆ ತನ್ನ ಬಗ್ಗೆ ಮಾತಾಡಲಿ ಅದರೆ ಸುಖಾಸುಮ್ಮನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದರೆ ತಾನು ಸುಮ್ಮನಿರಲ್ಲ, ತೀಕ್ಷ್ಣ ಪ್ರತಿಕ್ರಿಯೆ ಸಿಕ್ಕೇ ಸಿಗುತ್ತೆ ಎಂದರು.

ಕಲಬುರಗಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಡಾದಿಂದ ಅಲಾಟ್ ಆಗಿದ್ದ ಸೈಟುಗಳು ಅಕ್ರಮವಾಗಿ ಪಡೆದಿರಲಿಲ್ಲವಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವುಗಳನ್ನು ವಾಪಸ್ಸು ಕೊಟ್ಟಿದ್ದು ಯಾಕೆ ಎಂದು ಖಾರವಾಗಿ ಪ್ರಶ್ನಿಸಿದರು. ಹಿಂದೆ ಸರ್ಕಾರದಿಂದ ಪಡೆದ ಪ್ರಶಸ್ತಿ, ಪುರಸ್ಕಾರಗಳನ್ನು ಕೆಲ ಬುದ್ಧಿಜೀವಿಗಳು ವಾಪಸ್ಸು ಮಾಡಿದ ಹಾಗೆ ಈಗ ಸೈಟು, ಜಮೀನುಗಳನ್ನು ವಾಪಸ್ಸು ಮಾಡುವ ಅಭಿಯಾನ ಶುರುವಾಗಿದೆ, ಎಲ್ಲರೂ ಕಳ್ಳರೇ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮತ್ತೊಮ್ಮೆ ಬಸನಗೌಡ ಯತ್ನಾಳ್ ವಿರುದ್ಧ ಏಕವಚನದಲ್ಲೇ ಮಾತಾಡಿದ ಶಿವಕುಮಾರ್