AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಮ್ಮೆ ಬಸನಗೌಡ ಯತ್ನಾಳ್ ವಿರುದ್ಧ ಏಕವಚನದಲ್ಲೇ ಮಾತಾಡಿದ ಶಿವಕುಮಾರ್

ಮತ್ತೊಮ್ಮೆ ಬಸನಗೌಡ ಯತ್ನಾಳ್ ವಿರುದ್ಧ ಏಕವಚನದಲ್ಲೇ ಮಾತಾಡಿದ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 21, 2024 | 1:16 PM

ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ತಾನೇ ಅಭ್ಯರ್ಥಿ ಅಂತ ಶಿವಕುಮಾರ್ ಮತ್ತೊಮ್ಮೆ ಹೇಳಿದರು. ಪ್ರತಿಸಲ ಅದನ್ನೇ ಹೇಳ್ತೀರಲ್ಲ ಅಂದಾಗ ಶಿವಕುಮಾರ್, ಕುಮಾರಸ್ವಾಮಿ ಹೇಳ್ತಿಲ್ಲವಾ? ಅಂದರು. ಕುಮಾರಸ್ವಾಮಿಯನ್ನು ಗೊಂದಲದಲ್ಲಿಡಲು ಹಾಗೇ ಹೇಳ್ತೀರಾ ಅಂದಿದ್ದಕ್ಕೆ ನಿರುತ್ತರರಾದ ಶಿವಕುಮಾರ್ ಮುಗುಳ್ನಗಲಷ್ಟೇ ಶಕ್ತರಾದರು.

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ನಿಲ್ಲದ ವೈಷಮ್ಯ. ಇವತ್ತು ನಗರದಲ್ಲಿ ತಮ್ಮ ಆದಾಯಕ್ಕೆ ಮೀರಿದ ಸಂಪತ್ತಿನ ಪ್ರಕರಣದ ಬಗ್ಗೆ ಸಿಬಿಐ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿರುವ ಬಗ್ಗೆ ಮಾಧ್ಯಮದ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಶಿವಕಮಾರ್ ತಮ್ಮ ಫ್ರಸ್ಟ್ರೇಷನ್ ಮತ್ತು ಹತಾಷೆಯನ್ನು ಯತ್ನಾಳ್ ವಿರುದ್ಧ ಏಕವಚನದಲ್ಲಿ ಮಾತಾಡುವ ಮೂಲಕ ಹೊರಹಾಕಿದರು. ಯತ್ನಾಳ್ ಪ್ರತಿಕ್ರಿಯೆ ಸಹ ಏಕವಚನದಲ್ಲೇ ಇರಲಿದೆ, ನೀವು ನೋಡ್ತಾ ಇರಿ. ರಾಜ್ಯ ಸರ್ಕಾರದ ಮನವಿ ಮೇರೆಗೆ ಶಿವಕುಮಾರ್ ಡಿಎ ಪ್ರಕರಣವನ್ನು ಹೈಕೋರ್ಟ್ ಸಿಬಿಐ ಬದಲು ಲೋಕಾಯುಕ್ತ ತನಿಖೆಗೆ ಒಪ್ಪಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಆದಾಯ ಮೀರಿ‌ ಆಸ್ತಿ ಗಳಿಕೆ ಪ್ರಕರಣ: ಡಿಕೆ ಶಿವಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಬಿಐ