Vijayapura Earthquake: ವಿಜಯಪುರದಲ್ಲಿ ಮತ್ತೆ ಭೂಕಂಪನದ ಅನುಭವ: ಪದೇ ಪದೇ ಕಂಪನದಿಂದ ಆತಂಕಗೊಂಡ ಹಳ್ಳಿ ಜನ
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಇಂದು (ಡಿ.4) ರಾತ್ರಿ 7.57ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಮತ್ತೆ ಭೂಮಿ ಕಂಪಿಸಿದೆ (Earthquake). ತಾಲೂಕಿನಲ್ಲಿ ಇಂದು (ಡಿ.4) ರಾತ್ರಿ 7.57ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ತಿಕೋಟಾ ತಾಲೂಕಿನ ಹುಬನೂರು, ಟಕ್ಕಳಕಿ, ಕಳ್ಳಕವಟಗಿ, ಘೋಣಸಗಿ, ಇಟ್ಟಂಗಿಹಾಳ, ಮಲಕನದೇವರಹಟ್ಟಿ, ಜಾಲಗೇರಿ, ಸೋಮದೇವರಹಟ್ಟಿ ಗ್ರಾಮಗಳಲ್ಲಿ ಭೂಮಿಯಿಂದ ಜೋರಾದ ಶಬ್ಧ ಕೇಳಿಸಿದ ಜೊತೆಗೆ ಕಂಪನದ ಅನುಭವವಾಗಿದೆ. ಇನ್ನೂ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನದಿಂದ ಜನ ಆತಂಕಗೊಂಡಿದ್ದಾರೆ.
ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Dec 04, 2022 08:44 PM