ಕಳೆದ ಹತ್ತು ವರ್ಷಗಳಲ್ಲಿ ನಡೆಸಿರುವ ಹಣಕಾಸು ವ್ಯವಹಾರದ ದಾಖಲೆಗಳನ್ನು ಇಡಿ ಅಧಿಕಾರಿಗಳು ಕೇಳಿದ್ದಾರೆ: ಡಿಕೆ ಸುರೇಶ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 07, 2022 | 5:33 PM

ಅದಲ್ಲದೆ ತಾನು ಕಳೆದ 10 ವರ್ಷಗಳ ಅವಧಿಯಲ್ಲಿ ನಡೆಸಿರರುವ ಹಣಕಾಸು ವ್ಯವಹಾರಗಳ ಬಗ್ಗೆ ದಾಖಲೆಗಳನ್ನು ಇಡಿ ಕೇಳಿದ್ದಾರೆ ಅಂತ ಹೇಳಿದ ಸುರೇಶ ಅವುಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿರುವುದಾಗಿ ಹೇಳಿದರು.

ದೆಹಲಿಯಲ್ಲಿ ಶುಕ್ರವಾರ ಜಾರಿ ನಿರ್ದೇಶನಾಲಯದ (Enforcement Directorate) ಎದುರು ಹಾಜರಾದ ಸಂಸದ ಡಿಕೆ ಸುರೇಶ (DK Suresh) ಅವರು 4 ಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರಬಂದ ನಂತರ ಮಾಧ್ಯಮದವರೊಂದಿಗೆ ಮಾತಾಡಿದರು. ಯಂಗ್ ಇಂಡಿಯಾ ಸಂಸ್ಥೆಗೆ ತಾನು ನೀಡಿದ 25 ಲಕ್ಷ ರೂ. ಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು ಅಂತ ಸಂಸದರು ಹೇಳಿದರು. ಅದಲ್ಲದೆ ತಾನು ಕಳೆದ 10 ವರ್ಷಗಳ ಅವಧಿಯಲ್ಲಿ ನಡೆಸಿರರುವ ಹಣಕಾಸು ವ್ಯವಹಾರಗಳ (financial transactions) ಬಗ್ಗೆ ದಾಖಲೆಗಳನ್ನು ಇಡಿ ಕೇಳಿದ್ದಾರೆ ಅಂತ ಹೇಳಿದ ಸುರೇಶ ಅವುಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿರುವುದಾಗಿ ಹೇಳಿದರು.

Published on: Oct 07, 2022 05:29 PM