ಬಾಗಲಕೋಟೆ: ಈಜೇ ಗೊತ್ತಿರದ ಕುಡುಕನೊಬ್ಬ ಮೊಸಳೆಯನ್ನು ಕೊಲ್ಲುತ್ತೇನೆ ಅಂತ ಕೆರೆಗೆ ಹಾರಿದ!
ಮುರನಾಳನದಲ್ಲಿರುವ ಕೆರೆಯೊಂದರಲ್ಲಿ ಮೊಸಳೆ ಇದ್ದು ಅದನ್ನು ಕೊಂದು ಬಿಡುತ್ತೇನೆ ಅಂತ ಕುಡಿದ ಮತ್ತಿನಲ್ಲಿ ಅವನು ನೀರಿಗೆ ಹಾರಿದ್ದಾನೆ.
ಬಾಗಲಕೋಟೆ: ಮೊಸಳೆ ಒಂದು ಭಯಾನಕ ಪ್ರಾಣಿ ಅಂತ ಎಲ್ಲರಿಗೂ ಗೊತ್ತು ಆದರೆ, ಬಾಗಲಕೋಟೆ ಜಿಲ್ಲೆ ಮುರನಾಳ ಪುನರ್ ವಸತಿ ಕೇಂದ್ರದಲ್ಲಿ ವಾಸವಾಗಿರುವ ಮೌಲಾಸಾಬ್ ಹೆಸರಿನ ಕುಡುಕನಿಗೆ ಮಾತ್ರ ಗೊತ್ತಿದ್ದಂತಿಲ್ಲ ಮಾರಾಯ್ರೇ. ಮುರನಾಳನದಲ್ಲಿರುವ ಕೆರೆಯೊಂದರಲ್ಲಿ ಮೊಸಳೆ ಇದ್ದು ಅದನ್ನು ಕೊಂದು ಬಿಡುತ್ತೇನೆ ಅಂತ ಕುಡಿದ ಮತ್ತಿನಲ್ಲಿ ಅವನು ನೀರಿಗೆ ಹಾರಿದ್ದಾನೆ. ಅವನು ಮೊಸಳೆ ಬೇಟೆಯಾಡುವ ಮಾತು ಹಾಗಿರಲಿ, ಅವನು ಮೊಸಳೆಗೆ ಬೇಟೆಯಾಗದಿರಲಿ ಅಂತ ಬೇರೊಬ್ಬ ವ್ಯಕ್ತಿ ನೀರಿಗೆ ಧುಮುಕಬೇಕಾಯಿತು. ಯಾಕೆ ಗೊತ್ತಾ? ನೀರಿಗೆ ಹಾರಿದ ಕುಡುಕನಿಗೆ ಈಜುವುದೇ ಗೊತ್ತಿರಲಿಲ್ಲ!
Latest Videos