ಬಿಡುಗಡೆ ಆಗಲಿಲ್ಲ ‘ಎದ್ದೇಳು ಮಂಜುನಾಥ 2’, ಚಿತ್ರಮಂದಿರಗಳಿಗೆ ಎಷ್ಟು ನಷ್ಟ?
Eddelu Manjunatha 2: ಗುರುಪ್ರಸಾದ್ ನಟಿಸಿದ್ದ ಕೊನೆಯ ಸಿನಿಮಾ ಎದ್ದೇಳು ಮಂಜುನಾಥ 2 ಇಂದು ಬಿಡುಗಡೆ ಆಗಬೇಕಿತ್ತು. ಆದರೆ ನಿರ್ಮಾಪಕರು ಮತ್ತು ಗುರುಪ್ರಸಾದ್ ಪತ್ನಿಯ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಸಿನಿಮಾ ನಿಂತು ಹೋಗಿದೆ. ‘ಎದ್ದೇಳು ಮಂಜುನಾಥ 2’ ಸಿನಿಮಾದ ಬಿಡುಗಡೆಗೆ ತಯಾರಿ ಮಾಡಿಕೊಂಡಿದ್ದ ಚಿತ್ರಮಂದಿರ ಮಾಲೀಕರು ಇದರಿಂದ ನಷ್ಟ ಅನುಭವಿಸಿದ್ದಾರೆ. ಇಲ್ಲಿದೆ ಚಿತ್ರಮಂದಿರ ಸಿಬ್ಬಂದಿಯ ಪ್ರತಿಕ್ರಿಯೆ.
ದಿವಂಗತ ಗುರುಪ್ರಸಾದ್ ನಟಿಸಿದ್ದ ‘ಎದ್ದೇಳು ಮಂಜುನಾಥ 2’ ಸಿನಿಮಾ ಇಂದು (ಫೆಬ್ರವರಿ 21) ಬಿಡುಗಡೆ ಆಗಬೇಕಿತ್ತು. ಆದರೆ ಗುರುಪ್ರಸಾದ್ ಅವರ ಪತ್ನಿ ಸುಮಿತ್ರ ಅವರು ನ್ಯಾಯಾಲಯದ ಮೆಟ್ಟಿಲೇರಿ ಸಿನಿಮಾ ಬಿಡುಗಡೆಗೆ ಸ್ಟೇ ತಂದಿದ್ದಾರೆ. ಈ ಕಾರಣದಿಂದಾಗಿ ಇಂದು (ಫೆಬ್ರವರಿ 21) ಸಿನಿಮಾ ಬಿಡುಗಡೆ ಆಗಿಲ್ಲ. ಪ್ರಸನ್ನ ಚಿತ್ರಮಂದಿರದಲ್ಲಿ ‘ಎದ್ದೇಳು ಮಂಜುನಾಥ 2’ ಸಿನಿಮಾ ಬಿಡುಗಡೆಗೆ ಸಕಲ ತಯಾರಿ ಮಾಡಿಕೊಳ್ಳಲಾಗಿತ್ತು. ದೊಡ್ಡ ಪೋಸ್ಟರ್ಗಳನ್ನು ಹಾಕಲಾಗಿತ್ತು. ಆನ್ಲೈನ್ನಲ್ಲಿ ಟಿಕೆಟ್ ಮಾರಾಟವನ್ನೂ ಮಾಡಲಾಗಿತ್ತು. ಆದರೆ ನಿರ್ಮಾಪಕರು ಮತ್ತು ಗುರುಪ್ರಸಾದ್ ಪತ್ನಿಯ ನಡುವಿನ ಜಠಾಪಟಿಯಿಂದಾಗಿ ಸಿನಿಮಾ ಬಿಡುಗಡೆ ಆಗಿಲ್ಲ. ಟಿವಿ9 ಜೊತೆಗೆ ಮಾತನಾಡಿರುವ ಪ್ರಸನ್ನ ಚಿತ್ರಮಂದಿರದ ಸಿಬ್ಬಂದಿ ನಿರ್ಮಾಪಕ ಮತ್ತು ಸುಮಿತ್ರ ನಡುವಿನ ಜಟಾಪಟಿಯಿಂದ ನಮಗೆ ನಷ್ಟವಾಗಿದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ