Bigg Boss Kannada: ಎಂಟು ಜನರ ಮೇಲೆ ಎಲಿಮಿನೇಷನ್ ತೂಗುಗತ್ತಿ; ಯಾರಾಗಲಿದ್ದಾರೆ ಔಟ್?
ಬಿಗ್ ಬಾಸ್ ಎಂಟನೇ ವಾರ ಪೂರ್ಣಗೊಳ್ಳುತ್ತಿರುವಾಗ ಸ್ಪರ್ಧೆ ಜೋರಾಗಿದೆ. ಈ ವಾರ ಎಂಟು ಜನರು ನಾಮಿನೇಟ್ ಆಗಿದ್ದಾರೆ. ಈ ಪೈಕಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಅದು ಯಾರು ಎನ್ನುವ ಪ್ರಶ್ನೆ ಮೂಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಎಂಟನೇ ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಈ ವಾರ ಸಂಗೀತಾ ಶೃಂಗೇರಿ, ವಿನಯ್ ಗೌಡ, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ (Drone Prathap), ಸ್ನೇಹಿತ್ ಗೌಡ, ತನಿಷಾ ಕುಪ್ಪಂಡ, ನಮ್ರತಾ ಗೌಡ, ಮೈಕಲ್ ಅಜಯ್ ನಾಮಿನೇಟ್ ಆಗಿದ್ದಾರೆ. ಈ ವಾರ ಒಬ್ಬರು ಎಲಿಮಿನೇಟ್ ಆಗಲೇಬೇಕಿದೆ. ಎಲ್ಲಾ ಸ್ಪರ್ಧಿಗಳು ಈ ವಾರ ಸಾಕಷ್ಟು ಶ್ರಮ ಹಾಕಿದ್ದಾರೆ. ಆದಾಗ್ಯೂ ಒಬ್ಬರು ಹೋಗೋದು ಅನಿವಾರ್ಯ. ಅದು ಯಾರು ಎನ್ನುವ ಪ್ರಶ್ನೆಗೆ ಭಾನುವಾರ (ಡಿಸೆಂಬರ್ 3) ಉತ್ತರ ಸಿಗಲಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ