Karwar Rains: ಮಳೆ ನೀರು ಮನೆಗೆ ನುಗ್ಗಿ ವೃದ್ಧೆ ಸಾವು, ದುಃಖದಿಂದ ಸಮಸ್ಯೆ ಹೇಳಿಕೊಂಡ ಪಕ್ಕದ ಮನೆ ಗೃಹಿಣಿ

| Updated By: Digi Tech Desk

Updated on: Jul 05, 2023 | 1:50 PM

ಸೀ ಬರ್ಡ್ ನೌಕಾನೆಲೆ ನಿರ್ಮಾಣಗೊಂಡಾಗಿನಿಂದ ಹಳ್ಳದ ಹರಿಯುವಿಕೆಗೆ ಅಡಚಣೆ ಉಂಟಾಗಿ ನೀರು ಜನವಾಸ್ತವ್ಯ ಪ್ರದೇಶಗಳಿಗೆ ನುಗ್ಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಗೃಹಿಣಿ ಹೇಳುತ್ತಾರೆ.

ಕಾರವಾರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಒಂಟಿ ಬದುಕು ನಡೆಸುತ್ತಿದ್ದ ವೃದ್ಧೆಯೊಬ್ಬರು (elderly woman) ಬಲಿಯಾಗಿದ್ದಾರೆ. ದುರ್ದೈವಿಯ ನೆರೆಮನೆ ನಿವಾಸಿಯಾಗಿರುವ ಗೃಹಿಣಿಯೊಬ್ಬರು ಭಾರೀ ಮಳೆಯಾದಾಗ ಈ ಭಾಗದ ಜನ ಅನುಭವಿಸುವ ತೊಂದರೆಗಳನ್ನು ಟಿವಿ9 ಕನ್ನಡ ವಾಹಿನಿಯ ಕಾರವಾರ ವರದಿಗಾರನಿಗೆ ವಿವರಿಸಿದ್ದಾರೆ. ಮನೆಗಳ ಮುಂಭಾಗದಲ್ಲಿ ಹಳ್ಳವೊಂದು (stream) ಹರಿಯುತ್ತಿದ್ದು ಮಳೆ ಹೆಚ್ಚಾದಾಗ ನೀರು ಉಕ್ಕಿ ಮನೆಗಳೊಳಗೆ ಬರುತ್ತದೆ, ಹಾಗಾಗೇ ಅಜ್ಜಿಯ ಪ್ರಾಣ ಹೋಗಿದೆ ಎಂದು ಗೃಹಿಣಿ ಹೇಳುತ್ತಾರೆ. ಮೊದಲೆಲ್ಲ ಹಳ್ಳದ ನೀರು ಸರಾಗವಾಗಿ ಹರಿದು ಸಮುದ್ರಕ್ಕೆ ಹೋಗಿ ಬೀಳುತ್ತಿತ್ತಂತೆ ಆದರೆ ಅಲ್ಲಿಂದ ಕೊಂಚ ದೂರದಲ್ಲಿ ಸೀ ಬರ್ಡ್ ನೌಕಾನೆಲೆ (Seabird Naval Base) ನಿರ್ಮಾಣಗೊಂಡಾಗಿನಿಂದ ಹಳ್ಳದ ಹರಿಯುವಿಕೆಗೆ ಅಡಚಣೆ ಉಂಟಾಗಿ ನೀರು ಜನವಾಸ್ತವ್ಯ ಪ್ರದೇಶಗಳಿಗೆ ನುಗ್ಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಗೃಹಿಣಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:35 pm, Wed, 5 July 23

Follow us on