ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​

| Updated By: ಗಂಗಾಧರ​ ಬ. ಸಾಬೋಜಿ

Updated on: Mar 26, 2025 | 12:40 PM

ವಿಜಯಪುರದ ವೃದ್ಧೆಯೊಬ್ಬರು ಇಂಡಿ-ಚಡಚಣ ಮಾರ್ಗದ ಸರ್ಕಾರಿ ಬಸ್‌ನಲ್ಲಿ ತಮ್ಮ ಉಚಿತ ಪ್ರಯಾಣ ಟಿಕೆಟ್ ಕಳೆದುಕೊಂಡು ಇಡೀ ಬಸ್​​ ಹುಡುಕಾಡಿರುವಂತಹ ಘಟನೆ ನಡೆದಿದೆ. ಎಷ್ಟೇ ಹುಡುಕಿದರೂ ಸಿಗದಿದ್ದಾಗ ಕಂಡಕ್ಟರ್‌ಗೆ ಮತ್ತೊಂದು ಟಿಕೆಟ್ ನೀಡುವಂತೆ ಮನವಿ ಮಾಡಿದ್ದು, ಹಾಗೆಲ್ಲಾ ಕೊಡಲು ಬರಲ್ಲವೆಂದು ಕಂಡಕ್ಟರ್‌ ಹೇಳಿದ್ದಾರೆ.

ವಿಜಯಪುರ, ಮಾರ್ಚ್​ 26: ವೃದ್ದೆಯೊಬ್ಬರು ಕಳೆದುಕೊಂಡ ಟಿಕೆಟ್​ಗಾಗಿ (bus ticket) ಇಡೀ ಸರ್ಕಾರಿ ಬಸ್​ನ್ನು ತಡಕಾಡಿರುವಂತಹ ಘಟನೆ ಇಂಡಿ – ಚಡಚಣ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್​ನಲ್ಲಿ ನಡೆದಿದೆ. ಕಂಡಕ್ಟರ್ ಕೊಟ್ಟ ಉಚಿತ ಪ್ರಯಾಣ ಟಿಕೆಟ್​ನ್ನು ವೃದ್ದೆ ಕಳೆದುಕೊಂಡಿದ್ದಾರೆ. ಮತ್ತೊಂದು ‌ಟಿಕೆಟ್ ನೀಡುವಂತೆ ಮನವಿ ಮಾಡಿದ್ದು, ಮತ್ತೊಂದು ಟಿಕೆಟ್ ಕೊಡಲು ಬರಲ್ಲ ಎಂದು ಕಂಡಕ್ಟರ್​ ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.