ಮಲ್ಲೇಶ್ವರಂನಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಪಿಂಕ್ ಮತಗಟ್ಟೆ, ಇಲ್ಲಿ ಮಹಿಳೆಯರದ್ದೇ ಕಾರುಬಾರು!

|

Updated on: Apr 25, 2024 | 5:15 PM

ರಾಜ್ಯ ಚುನಾವಣಾ ಆಯೋಗವು ನಾಳೆ ನಡೆಯುವ ಮತದಾನಕ್ಕೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಖಿ ಪಿಂಕ್ ಮತಗಟ್ಟೆ ಕೇಂದ್ರ ಸ್ಥಾಪಿಸಿದೆ. ಮಹಿಳಾ ಮತದಾರರನ್ನು ಸೆಳೆಯುವುದು ಪಿಂಕ್ ಮತಗಟ್ಟೆ ಸ್ಥಾಪಿಸುವ ಹಿಂದಿನ ಉದ್ದೇಶವಾಗಿದೆ. ಟಿವಿ9 ಬೆಂಗಳೂರು ವರದಿಗಾರ ಮತಗಟ್ಟೆಯ ಬಗ್ಗೆ ಹಲವು ವಿಶೇಷತೆಗಳನ್ನು ಈ ವಿಡಿಯೋನಲ್ಲಿ ವಿವರಿಸಿದ್ದಾರೆ.

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ (Lok Sabha constituencies) ಪೈಕಿ 14 ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ. ಮತದಾನದ ಪ್ರಮಾಣ ಪ್ರತಿಬಾರಿ ಕಡಿಮೆಯಾಗುತ್ತಿರುವುದು ಚುನಾವಣಾ ಆಯೋಗಕ್ಕೆ (Election Commission) ತಲೆನೋವಾಗಿ ಪರಣಮಿಸಿದೆ. ಇದನ್ನು ಹೋಗಲಾಡಿಸುವ ಒಂದು ಪ್ರಯತ್ನವಾಗಿ ರಾಜ್ಯ ಚುನಾವಣಾ ಆಯೋಗವು ನಾಳೆ ನಡೆಯುವ ಮತದಾನಕ್ಕೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ (Malleshwaram Assembly segment) ಒಂದು ಸಖಿ ಪಿಂಕ್ ಮತಗಟ್ಟೆ ಕೇಂದ್ರ ಸ್ಥಾಪಿಸಿದೆ. ಮಹಿಳಾ ಮತದಾರರನ್ನು ಸೆಳೆಯುವುದು ಪಿಂಕ್ ಮತಗಟ್ಟೆ ಸ್ಥಾಪಿಸುವ ಹಿಂದಿನ ಉದ್ದೇಶವಾಗಿದೆ. ಟಿವಿ9 ಬೆಂಗಳೂರು ವರದಿಗಾರ ಮತಗಟ್ಟೆಯ ಬಗ್ಗೆ ಹಲವು ವಿಶೇಷತೆಗಳನ್ನು ಈ ವಿಡಿಯೋನಲ್ಲಿ ವಿವರಿಸಿದ್ದಾರೆ. ಇದು ಮತಗಟ್ಟೆಗಿಂತ ಜಾಸ್ತಿ ಮಗುವೊಂದರ ಹುಟ್ಟುಹಬ್ಬಕ್ಕೆ ಸಿದ್ಧಪಡಿಸಿರುವ ಪಾರ್ಟಿ ಹಾಲ್ ನಂತೆ ಕಾಣುತ್ತದೆ. ಪಿಂಕ್ ಬಣ್ಣದ ಪರದೆ, ಬಲೂನ್ ಗಳು ಗಮನ ಸೆಳೆಯುತ್ತವೆ ಮಾರಾಯ್ರೇ. ವರದಿಗಾರ ಹೇಳುವ ಪ್ರಕಾರ, ನಾಳೆ ಕಾರ್ಯನಿರ್ವಹಿಸುವ ಪೋಲಿಂಗ್ ಆಫೀಸರ್, ಸಹಾಯಕ ಪೋಲಿಂಗ್ ಅಧಿಕಾರಿ ಮತ್ತು ಭದ್ರತಾ ದಳದ ಸಿಬ್ಬಂದಿ ಸಹ ಮಹಿಳೆಯರೇ ಆಗಿರಲಿದ್ದಾರೆ. ಈಗಲಾದರೂ ವೋಟು ಮಾಡ್ರಮ್ಮ ತಾಯಂದಿರಾ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಶುಕ್ರವಾರ ಮತದಾನ; ಕ್ಷೇತ್ರಗಳು, ಸಮಯದ ವಿವರ ಇಲ್ಲಿದೆ