ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್-ಎಲ್ಲ ಸಮುದಾಯಗಳ ಜನ ನನ್ನ ಪರ ಮತ ಚಲಾಯಿಸುವ ಭರವಸೆ ನೀಡಿದ್ದಾರೆ: ಕೆಎಸ್ ಈಶ್ವರಪ್ಪ
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿರುವ ರಿಚರ್ಡ್ ಎನ್ನುವವರು ಒಮ್ಮೆ ಮನೆಗೆ ಮನೆಗೆ ಬಂದು ಹೋಗಿ ಅಂತ ಹೇಳಿದ್ದು ತಮ್ಮ ಎಲ್ಲ ಪರಿಚಯಸ್ಥರಿಗೆ ನಿಮಗೆ ಮಾತ್ರ ವೋಟು ಹಾಕಬೇಕೆಂದು ಹೇಳುತ್ತ್ತೇನೆ ಎಂದಿದ್ದಾರೆ ಎಂದು ಮಾಜಿ ಸಚಿವ ಹೇಳಿದರು. ರಾಜ್ಯದ 27 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಮತ್ತು 28 ನೇ ಸ್ಥಾನವನ್ನು ತಾನು ಗೆದ್ದು ದೆಹಲಿಯಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಮಂತ್ರಿಯಾಗಬೇಕೆಂದು ಕೈ ಎತ್ತುವುದಾಗಿ ಈಶ್ವರಪ್ಪ ಹೇಳಿದರು.
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಇಂದು ಮನೆಮನೆ ತಿರುಗಿ ಮತ ಯಾಚಿಸಿದ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ (KS Eshwarappa) ತಮ್ಮ ಗೆಲುವಿನ ಬಗ್ಗೆ ಮತ್ತೊಮ್ಮೆ ಅತೀವ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ತನಗೆ ಕೇವಲ ಹಿಂದೂಗಳ ಬೆಂಬಲವಲ್ಲದೆ ಕ್ರಿಶ್ಚಿಯನ್ (Christian) ಮತ್ತು ಮುಸಲ್ಮಾನ (Muslim) ಸಮುದಾಯಗಳ ಬೆಂಬಲ ಸಹ ಇದೆ ಎಂದು ಹೇಳಿದರು. ತಾನು ಹಿಂದೂತ್ವವಾದಿಯೇ ಹೊರತು ಮುಸಲ್ಮಾನರನ್ನು ದ್ವೇಷಿಸುವ ವ್ಯಕ್ತಿ ಅಲ್ಲ, ಆ ಸಮುದಾಯದ ಒಂದಷ್ಟು ಗೂಂಡಾಗಳ ಬಗ್ಗೆ ಮಾತ್ರ ತನಗೆ ಕೋಪವಿದೆ ಎಂದು ಈಶ್ವರಪ್ಪ ಹೇಳಿದರು. ಸಾಗರದಿಂದ ಲೋಬೋ ಹೆಸರಿನ ವ್ಯಕ್ತಿ ಫೋನ್ ಮಾಡಿ ತಮ್ಮ ಸಮುದಾಯದ ಪಾದ್ರಿಗಳೆಲ್ಲ ನಿಮ್ಮನ್ನು ಆಶೀರ್ವದಿಸಿದ್ದಾರೆ ಅಂತ ಹೇಳಿದ್ದಾರೆ ಮತ್ತು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿರುವ ರಿಚರ್ಡ್ ಎನ್ನುವವರು ಒಮ್ಮೆ ಮನೆಗೆ ಮನೆಗೆ ಬಂದು ಹೋಗಿ ಅಂತ ಹೇಳಿದ್ದು ತಮ್ಮ ಎಲ್ಲ ಪರಿಚಯಸ್ಥರಿಗೆ ನಿಮಗೆ ಮಾತ್ರ ವೋಟು ಹಾಕಬೇಕೆಂದು ಹೇಳುತ್ತ್ತೇನೆ ಎಂದಿದ್ದಾರೆ ಎಂದು ಮಾಜಿ ಸಚಿವ ಹೇಳಿದರು. ರಾಜ್ಯದ 27 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಮತ್ತು 28 ನೇ ಸ್ಥಾನವನ್ನು ತಾನು ಗೆದ್ದು ದೆಹಲಿಯಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಮಂತ್ರಿಯಾಗಬೇಕೆಂದು ಕೈ ಎತ್ತುವುದಾಗಿ ಈಶ್ವರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅವರಿವರ ಕಾಲು ಹಿಡಿದು ಬಿಜೆಪಿ ರಾಜ್ಯಾಧ್ಯಕ್ಷನಾದವನಿಗೆ ನನ್ನ ಶ್ರಮದ ಬಗ್ಗೆ ಏನು ಗೊತ್ತಿರುತ್ತದೆ? ಕೆಎಸ್ ಈಶ್ವರಪ್ಪ