Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವರಿವರ ಕಾಲು ಹಿಡಿದು ಬಿಜೆಪಿ ರಾಜ್ಯಾಧ್ಯಕ್ಷನಾದವನಿಗೆ ನನ್ನ ಶ್ರಮದ ಬಗ್ಗೆ ಏನು ಗೊತ್ತಿರುತ್ತದೆ? ಕೆಎಸ್ ಈಶ್ವರಪ್ಪ

ಅವರಿವರ ಕಾಲು ಹಿಡಿದು ಬಿಜೆಪಿ ರಾಜ್ಯಾಧ್ಯಕ್ಷನಾದವನಿಗೆ ನನ್ನ ಶ್ರಮದ ಬಗ್ಗೆ ಏನು ಗೊತ್ತಿರುತ್ತದೆ? ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 18, 2024 | 5:48 PM

ಶಿವಮೊಗ್ಗ ಕ್ಷೇತ್ರದಲ್ಲಿ ತಮ್ಮ ಗೆಲುವು ನಿಶ್ಚಿತ ಎಂದ ಈಶ್ವರಪ್ಪ ತನ್ನ ಹಿಂದೂತ್ವ ವಾದವನ್ನು ಕಾಂಗ್ರೆಸ್ ಮುಖಂಡರು ಸಹ ಒಪ್ಪಿ ಬೆಂಬಲ ಸೂಚಿಸುತ್ತಿದ್ದಾರೆ. ಕಾಂಗ್ರೆಸ್ ಒಬ್ಬ ದುರ್ಬಲ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿದೆ ಮತ್ತು ರಾಘವೇಂದ್ರನನ್ನು ನಾವು ಗೆಲ್ಲಲು ಬಿಡಲ್ಲ, ಹಾಗಾಗಿ ನಮ್ಮ ಬೆಂಬಲ ನಿಮಗೆ ಅಂತ ಅವರು ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.    

ಉಡುಪಿ: ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಕೆಎಸ್ ಈಶ್ವರಪ್ಪ (KS Eshwarappa), ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರನ್ನು ಎಳಸು, ರಾಜಕೀಯ ಜ್ಞಾನ ಇರದವನು ಎಂದು ಜರಿದರು. ಪಕ್ಷಕ್ಕೆ ಈಶ್ವರಪ್ಪ ಕೊಡುಗೆ ಏನೂ ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ ಎಂದಿದ್ದಕ್ಕೆ ಉರಿದು ಬಿದ್ದ ಈಶ್ವರಪ್ಪ, 4 ದಶಕಗಳ ಕಾಲ ಅವರಪ್ಪನೊಂದಿಗೆ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ, ಅವನು ಹೋಗಿ ತನ್ನಪ್ಪ ಮತ್ತು ತನ್ನಣ್ಣನಿಗೆ ನನ್ನ ಬಗ್ಗೆ ಕೇಳಲಿ, ಒಂದು ವೇಳೆ ಯಡಿಯೂರಪ್ಪ (BS Yediyurappa) ಸಹ ನನ್ನ ಕೊಡುಗೆ ನಗಣ್ಯ ಎಂದು ಹೇಳಿದರೆ ಆಗ ಅಪ್ಪ-ಮಗ ಇಬ್ಬರಿಗೂ ಉತ್ತರ ಕೊಡುತ್ತೇನೆ ಎಂದ ಈಶ್ವರಪ್ಪ, 6 ತಿಂಗಳು ದೆಹಲಿಯಲ್ಲಿ ಕೂತು ಅವರಿವರ ಕಾಲು ಹಿಡಿದು ಅಧ್ಯಕ್ಷನಾದವನಿಗೆ ರಾಜಕೀಯ ಏನು ಗೊತ್ತಿರುತ್ತದೆ ಎಂದು ಹೇಳಿದರು. ಶಿವಮೊಗ್ಗ ಕ್ಷೇತ್ರದಲ್ಲಿ ತಮ್ಮ ಗೆಲುವು ನಿಶ್ಚಿತ ಎಂದ ಈಶ್ವರಪ್ಪ ತನ್ನ ಹಿಂದೂತ್ವ ವಾದವನ್ನು ಕಾಂಗ್ರೆಸ್ ಮುಖಂಡರು ಸಹ ಒಪ್ಪಿ ಬೆಂಬಲ ಸೂಚಿಸುತ್ತಿದ್ದಾರೆ. ಕಾಂಗ್ರೆಸ್ ಒಬ್ಬ ದುರ್ಬಲ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿದೆ ಮತ್ತು ರಾಘವೇಂದ್ರನನ್ನು ನಾವು ಗೆಲ್ಲಲು ಬಿಡಲ್ಲ, ಹಾಗಾಗಿ ನಮ್ಮ ಬೆಂಬಲ ನಿಮಗೆ ಅಂತ ಅವರು ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಕಾಂಗ್ರೆಸ್ ನಾಯಕರೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ: ಕೆಎಸ್ ಈಶ್ವರಪ್ಪ