ಕೇರಳದ ತ್ರಿಶೂರ್‌ನಲ್ಲಿ ಟ್ಯಾಂಕ್‌ಗೆ ಬಿದ್ದು ಆನೆ ಮರಿ ಸಾವು; ವಿಡಿಯೋ ವೈರಲ್

|

Updated on: Dec 05, 2024 | 7:39 PM

ಆನೆ ಮರಿ ಸೆಪ್ಟಿಕ್ ಟ್ಯಾಂಕ್‌ನೊಳಗೆ ಬಿದ್ದಾಗ ಅದರ ಕುತ್ತಿಗೆಗೆ ಗಾಯಗಳಾಗಿ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರವಾದ ಕಾರಣವನ್ನು ದೃಢೀಕರಿಸಬಹುದು.

ತ್ರಿಶೂರ್: ಕೇರಳದ ತ್ರಿಶೂರ್​ನ ಚಾಲಕುಡಿ ಸಮೀಪದ ಪಾಲಪ್ಪಿಲ್ಲಿ ಗ್ರಾಮದಲ್ಲಿ ಇಂದು ಬೆಳಗ್ಗೆ ಹಳೆಯ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದ ಗಂಡು ಆನೆ ಮರಿಯೊಂದು ಗಾಯಗೊಂಡು ಸಾವನ್ನಪ್ಪಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಮಧ್ಯಾಹ್ನದ ವೇಳೆಗೆ ಆನೆ ಮರಿ ಸಾವನ್ನಪ್ಪಿದೆ. ಆನೆ ಮರಿ ಸೆಪ್ಟಿಕ್ ಟ್ಯಾಂಕ್‌ನೊಳಗೆ ಬಿದ್ದಾಗ ಅದರ ಕುತ್ತಿಗೆಗೆ ಗಾಯಗಳಾಗಿ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರವಾದ ಕಾರಣವನ್ನು ದೃಢೀಕರಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ