ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ವಾಹನ ಅಟ್ಟಿಸಿಕೊಂಡು ಬಂದ ಆನೆ, ಎದೆ ಝುಲ್ ಎನಿಸುವ ದೃಶ್ಯ

ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ವಾಹನ ಅಟ್ಟಿಸಿಕೊಂಡು ಬಂದ ಆನೆ, ಎದೆ ಝುಲ್ ಎನಿಸುವ ದೃಶ್ಯ

ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on: Nov 19, 2023 | 7:28 AM

ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ವೇಳೆ ಎದೆ ಝಲ್ ಎನಿಸುವ ಘಟನೆಯೊಂದು ನಡೆದಿದೆ. ಸಫಾರಿ ವಾಹನದ ಮೇಲೆ ಆನೆಯೊಂದು ದಾಳಿಗೆ ಯತ್ನಿಸಿದೆ. ಸಫಾರಿ ವಾಹನದ ಚಾಲಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ತಕ್ಷಣ ಚಾಲಕ ಹಿಮ್ಮುಖವಾಗಿ ಸಫಾರಿ ವಾಹನ ಚಲಾಯಿಸಿದ್ದು ಸ್ವಲ್ಪ ದೂರ ಅಟ್ಟಿಸಿಕೊಂಡು ಬಂದು ಆನೆ ವಾಪಸ್ಸಾಯಿತು. ಆನೆ ಅಟ್ಯಾಕ್ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೈಸೂರು, ನ.19: ಹುಣಸೂರು ತಾಲೂಕು ವ್ಯಾಪ್ತಿಯಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ (Nagarhole National Park) ಸಫಾರಿ ವೇಳೆ ಎದೆ ಝಲ್ ಎನಿಸುವ ಘಟನೆಯೊಂದು ನಡೆದಿದೆ. ಸಫಾರಿ ವಾಹನದ ಮೇಲೆ ಆನೆಯೊಂದು (Elephant) ದಾಳಿಗೆ ಯತ್ನಿಸಿದೆ. ಸಫಾರಿ ವಾಹನದ ಚಾಲಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಸಫಾರಿ ದಾರಿಯಲ್ಲಿ ಆನೆಗಳ ಹಿಂಡೊಂದು ಹೋಗುತ್ತಿತ್ತು. ಈ ಹಿಂಡಿನಲ್ಲಿ ಮರಿಯಾನೆ ಕೂಡ ಇತ್ತು. ಹೀಗಾಗಿ ಮರಿಯಾನೆಯನ್ನು ರಕ್ಷಿಸುವ ಸಲುವಾಗಿ ಮತ್ತೊಂದು ಆನೆ ಸಫಾರಿ ವಾಹನದ ಮೇಲೆ ದಾಳಿಗೆ ಯತ್ನಿಸಿತು.

ಆನೆಗಳ ಹಿಂಡಿನ ಬಳಿ ಸಫಾರಿ ವಾಹನ ಹೋಗುತ್ತಿದ್ದಂತೆ ಆಕ್ರೋಶಗೊಂಡ ಆನೆಯೊಂದು ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂತು. ತಕ್ಷಣ ಚಾಲಕ ಹಿಮ್ಮುಖವಾಗಿ ಸಫಾರಿ ವಾಹನ ಚಲಾಯಿಸಿದ್ದು ಸ್ವಲ್ಪ ದೂರ ಅಟ್ಟಿಸಿಕೊಂಡು ಬಂದು ಆನೆ ವಾಪಸ್ಸಾಯಿತು. ಆನೆ ಅಟ್ಯಾಕ್ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ