ಅಂಜನಾದ್ರಿ ಬೆಟ್ಟದಲ್ಲಿ ದೀಪಾವಳಿ ಆಚರಿಸಿಲ್ಲ: ರಾಜ್ಯ ಸರ್ಕಾರದ ವಿರುದ್ಧ ವಿದೇಶಿಗರು ಅಸಮಾಧಾನ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಪುರಾಣ ಪ್ರಸಿದ್ದ ಆಂಜನೇಯ ದೇವಸ್ಥಾನವಿದೆ. ಆದರೆ ಈ ದೇವಸ್ಥಾನದಲ್ಲಿ ದೀಪಾವಳಿ ಸಮಯದಲ್ಲಿಯೇ ಎಲ್ಲಿಯೂ ಕೂಡ ದೀಪಗಳನ್ನು ಹಚ್ಚದೆ ಇರುವುದು ಕೆಲ ವಿದೇಶಿಗರು ರಾಜ್ಯ ಸರ್ಕಾರದ ವಿರುದ್ಧ ವಿದೇಶಿಗರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ, ನವೆಂಬರ್ 18: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಪುರಾಣ ಪ್ರಸಿದ್ದ ಆಂಜನೇಯ ದೇವಸ್ಥಾನವಿದೆ. ಆದರೆ ಈ ದೇವಸ್ಥಾನದಲ್ಲಿ ದೀಪಾವಳಿ ಸಮಯದಲ್ಲಿಯೇ ಎಲ್ಲಿಯೂ ಕೂಡ ದೀಪಗಳನ್ನು ಹಚ್ಚದೆ ಇರುವುದು ಕೆಲ ವಿದೇಶಿಗರು (Foreigners) ರಾಜ್ಯ ಸರ್ಕಾರದ ವಿರುದ್ಧ ವಿದೇಶಿಗರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದು ಧರ್ಮವನ್ನು ಸ್ವೀಕರಿಸಿ ರಷ್ಯಾದಿಂದ ಬಂದಿದ್ದ ಮೀನಾಕ್ಷಿ ಗಿರಿ, ಸರಸ್ವತಿ ಮತ್ತು ಗಂಗಾ ಅನ್ನೋರು ಎರಡು ದಿನದ ಹಿಂದೆ ಆಂಜನಾದ್ರಿ ಬೆಟ್ಟಕ್ಕೆ ಬಂದಿದ್ದರು. ಇಡೀ ದೇಶ ದೀಪಾವಳಿ ಹಬ್ಬದ ಸಂಭ್ರಮದಲ್ಲಿದೆ. ಆದರೆ ಆಜನೇಯನ ದೇವಸ್ಥಾನದಲ್ಲಿ ಎಲ್ಲಿಯೂ ದೀಪಗಳು ಕಾಣಲಿಲ್ಲ. ಮುಜರಾಯಿ ಇಲಾಖೆಯಡಿಯಲ್ಲಿರುವ ದೇವಸ್ಥಾನದಲ್ಲಿ ಈ ರೀತಿ ಅವ್ಯವಸ್ಥೆ ಸರಿಯಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ರಷ್ಯಾ ಪ್ರಜೆಗಳ ವಿಡಿಯೋ ಇಂದು ಎಲ್ಲಡೆ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 18, 2023 08:38 PM
Latest Videos