Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಲೂರು ಬಳಿಯ ಕಾಫಿತೋಟಕ್ಕೆ ನುಗ್ಗಿದ್ದು ಒಂದಲ್ಲ ಎರಡಲ್ಲ; 25ಕ್ಕೂ ಹೆಚ್ಚು ಕಾಡಾನೆಗಳು!

ಬೇಲೂರು ಬಳಿಯ ಕಾಫಿತೋಟಕ್ಕೆ ನುಗ್ಗಿದ್ದು ಒಂದಲ್ಲ ಎರಡಲ್ಲ; 25ಕ್ಕೂ ಹೆಚ್ಚು ಕಾಡಾನೆಗಳು!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 18, 2023 | 6:55 PM

ಆನೆ, ಹುಲಿ, ಚಿರತೆ ಮೊದಲಾದ ವನ್ಯಜೀವಿಗಳನ್ನು ಅವುಗಳ ಮೂಲ ವಾಸಸ್ಥಳ ಕಾಡುಗಳಲ್ಲಿ ನೋಡುವುದು ರೋಮಾಂಚನ ಮೂಡಿಸುತ್ತದೆ ಅದರೆ ಇದೇ ಪ್ರಾಣಿಗಳನ್ನು ಜನವಸತಿ ಪ್ರದೇಶಗಳಲ್ಲಿ ಕಂಡರೆ ಹೃದಯ ಬಾಯಿಗೆ ಬರುತ್ತದೆ! ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಅಟ್ಟಿಸುವ ಪ್ರಯತ್ನದಲ್ಲಂತೂ ತೊಡಗಿದ್ದಾರೆ ಯಾವಾಗ ಯಶ ಕಾಣುತ್ತಾರೋ ಗೊತ್ತಿಲ್ಲ.

ಹಾಸನ: ಅನೆ ಒಂದಾಗಿದ್ದರೆ ಅರಣ್ಯ ಇಲಾಖೆ ಸಿಬ್ಬಂದಿ (forest department staff) ಹರಸಾಹಸಪಟ್ಟು ವಾಪಸ್ಸು ಕಾಡಿಗಟ್ಟಬಹುದು. ಅದರೆ, ಇಲ್ನೋಡಿ ಮರಿಯಾನೆಗಳೂ ಸೇರಿದಂತೆ 25 ಕ್ಕೂ ಹೆಚ್ಚು ಕಾಡಾನೆಗಳು (wild elephants)! ಊರಿಗೆ ಬಂದಿರುವ ಈ ಬೃಹತ್ ಆನೆಹಿಂಡನ್ನು ಕಾಡಿಗೆ ವಾಪಸ್ಸು ಕಳಿಸುವುದು ಹೇಗೆ ಸ್ವಾಮಿ? ಅಂದಹಾಗೆ ಈ ದೃಶ್ಯ ಕಂಡುಬಂದಿದ್ದ್ದು ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿರುವ (Bikkod village) ಕಾಫಿ ತೋಟವೊಂದರಲ್ಲಿ. ಈ ಭಾಗದಲ್ಲಿ ಕಾಡಾನೆಗಳ ಉಪಟಳ ಜಾಸ್ತಿಯಾಗುತ್ತಿದೆ ಎಂದು ಗ್ರಾಮಗಳ ನಿವಾಸಿಗಳು ಹೇಳುತ್ತಲೇ ಇದ್ದಾರೆ. ಕಾಫಿ ಸೇರಿದಂತೆ ಬಾಳೆ, ಅಡಕೆ ತೋಟಗಳನ್ನು ಅನೆಗಳು ತುಳಿದು ಹಾಳುಮಾಡುತ್ತಿವೆಯಂತೆ. ಆನೆ, ಹುಲಿ, ಚಿರತೆ ಮೊದಲಾದ ವನ್ಯಜೀವಿಗಳನ್ನು ಅವುಗಳ ಮೂಲ ವಾಸಸ್ಥಳ ಕಾಡುಗಳಲ್ಲಿ ನೋಡುವುದು ರೋಮಾಂಚನ ಮೂಡಿಸುತ್ತದೆ ಅದರೆ ಇದೇ ಪ್ರಾಣಿಗಳನ್ನು ಜನವಸತಿ ಪ್ರದೇಶಗಳಲ್ಲಿ ಕಂಡರೆ ಹೃದಯ ಬಾಯಿಗೆ ಬರುತ್ತದೆ! ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಅಟ್ಟಿಸುವ ಪ್ರಯತ್ನದಲ್ಲಂತೂ ತೊಡಗಿದ್ದಾರೆ ಯಾವಾಗ ಯಶ ಕಾಣುತ್ತಾರೋ ಗೊತ್ತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ