ಬೆಂಗಳೂರಿಂದ ಹಿಂಡಲಗಾ ಬಂದು ಗಣೇಶನಿಗೆ ನಮಸ್ಕರಿಸಿದ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳದ ಕಡೆ ತೆರಳಿದ್ದು ಯಾಕೆ?

ಬೆಂಗಳೂರಿಂದ ಹಿಂಡಲಗಾ ಬಂದು ಗಣೇಶನಿಗೆ ನಮಸ್ಕರಿಸಿದ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳದ ಕಡೆ ತೆರಳಿದ್ದು ಯಾಕೆ?

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 18, 2023 | 5:56 PM

ಸಭೆಯಿಂದ ಹೊರಬಂದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಲಿಲ್ಲ. ಸರಕ್ಕನೆ ಯತ್ನಾಳ್ ಅವರ ಕಾರಿನಲ್ಲಿ ಕುಳಿತು ಬಿಟ್ಟಿದ್ದರು. ವಿಜಯಪುರದ ಶಾಸಕನ ಕೋಪ, ತಾಪ, ಅಸಹನೆ, ಅಸಮಾಧಾನ ಕನ್ನಡಿಗರಿಗೆ ಅರ್ಥವಾಗಿತ್ತು. ಆದರೆ ರಮೇಶ್ ಕೂಡ ಯಾಕೆ ದುರ್ದಾನ ತೆಗೆದುಕೊಂಡವರ ಹಾಗೆ ಅಚೆ ಬಂದರು ಅನ್ನೋದು ಗೊತ್ತಾಗಲಿಲ್ಲ. ಹಿಂಡಲಗಾ ಗಣೇಶ ಮಂದಿರದಿಂದ ಹೊರಬಂದ ಬಳಿಕ ಅವರು ಅಜ್ಞಾತ ಸ್ಥಳದ ಕಡೆ ಹೊರಟರಂತೆ.

ಬೆಳಗಾವಿ: ನಮ್ಮ ರಾಜ್ಯದ ಕೆಲ ನಾಯಕರನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಮಾರಾಯ್ರೇ. ಇಲ್ನೋಡಿ, ಜಿಲ್ಲೆಯ ಹಿಂಡಲಗಾದಲ್ಲಿರುವ ಶ್ರೀ ವಿನಾಯಕ ಮಂದಿರಕ್ಕೆ (Sri Vinayaka Mandir) ತೆರಳಿ ಗಣೇಶನಿಗೆ ಕೈಮುಗಿದು ಅಲ್ಲಿಂದ ಹೊರಬರುತ್ತಿರುವ ಬಿಜೆಪಿ ನಾಯಕ ಮತ್ತು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ನಿನ್ನೆ ಬೆಂಗಳೂರಲ್ಲಿದ್ದರು. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಾಜರಿದ್ದ ರಮೇಶ್, ಪಕ್ಷದ ಬಂಡಾಯ ಪ್ರವೃತ್ತಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತು ಶಾಸಕ ಅರವಿಂದ್ ಬೆಲ್ಲದ್ (Arvind Bellad ) ಜೊತೆ ಸಭೆ ಅರಂಭಗೊಳ್ಳುವ ಮೊದಲೇ ಎದ್ದು ಬಂದಿದ್ದರು.ಯಾವಾಗ ಬೆಳಗಾವಿಗೆ ವಾಪಸ್ಸಾದರೋ ಗೊತ್ತಿಲ್ಲ. ಸಭೆಯಿಂದ ಹೊರಬಂದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಲಿಲ್ಲ. ಸರಕ್ಕನೆ ಯತ್ನಾಳ್ ಅವರ ಕಾರಿನಲ್ಲಿ ಕುಳಿತು ಬಿಟ್ಟಿದ್ದರು. ವಿಜಯಪುರದ ಶಾಸಕನ ಕೋಪ, ತಾಪ, ಅಸಹನೆ, ಅಸಮಾಧಾನ ಕನ್ನಡಿಗರಿಗೆ ಅರ್ಥವಾಗಿತ್ತು. ಆದರೆ ರಮೇಶ್ ಕೂಡ ಯಾಕೆ ದುರ್ದಾನ ತೆಗೆದುಕೊಂಡವರ ಹಾಗೆ ಅಚೆ ಬಂದರು ಅನ್ನೋದು ಗೊತ್ತಾಗಲಿಲ್ಲ. ಹಿಂಡಲಗಾ ಗಣೇಶ ಮಂದಿರದಿಂದ ಹೊರಬಂದ ಬಳಿಕ ಅವರು ಅಜ್ಞಾತ ಸ್ಥಳದ ಕಡೆ ಹೊರಟರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ