ವಿಜಯೇಂದ್ರ ಕೈಕೆಳಗೆ ನಾವು ಹೇಗೆ ಕೆಲಸ ಮಾಡುವುದು; ರಮೇಶ್ ಜಾರಕಿಹೊಳಿ ಪ್ರಶ್ನೆ

ಬಿಜೆಪಿ ವರಿಷ್ಠರ ವಿರುದ್ಧ ಸಾಹುಕಾರ್ ಸಹೋದರರು ಸಮರ ಸಾರಿದರೇ ಎಂಬ ಪ್ರಶ್ನೆಗೆ ಇದೀಗ ವ್ಯಕ್ತವಾಗಿದೆ. ಈ ಹಿಂದೆ ಎರಡು ಬಾರಿ ಬಿಜೆಪಿ ಅಧಿಕಾರಕ್ಕೆ ತರಲು ಮಹತ್ವದ ಪಾತ್ರ ವಹಿಸಿದ್ದ ಸಹೋದರರು ಈಗ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವುದು ಪ್ರಶ್ನೆ ಮೂಡಲು ಕಾರಣವಾಗಿದೆ.

ವಿಜಯೇಂದ್ರ ಕೈಕೆಳಗೆ ನಾವು ಹೇಗೆ ಕೆಲಸ ಮಾಡುವುದು; ರಮೇಶ್ ಜಾರಕಿಹೊಳಿ ಪ್ರಶ್ನೆ
ರಮೇಶ್ ಜಾರಕಿಹೊಳಿ
Follow us
| Updated By: ಗಣಪತಿ ಶರ್ಮ

Updated on: Nov 18, 2023 | 11:02 AM

ಬೆಳಗಾವಿ, ನವೆಂಬರ್ 18: ಪ್ರತಿಪಕ್ಷ ನಾಯಕನ ಆಯ್ಕೆಗೆ ಶುಕ್ರವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೆ ಮುನಿಸಿಕೊಂಡು ತೆರಳಿದ್ದ ಶಾಸಕ ರಮೇಶ್​​ ಜಾರಕಿಹೊಳಿ (Ramesh Jarkiholi) ಇದೀಗ ಪಕ್ಷದ ರಾಜ್ಯ ಘಟದ ಅಧ್ಯಕ್ಷರ ನೇಮಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ (BY Vijayendra) ನೇಮಕಕ್ಕೆ ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರದ ವೀಕ್ಷಕರ ಎದುರು ತಮ್ಮ ಬೇಗುದಿ ತೋಡಿಕೊಂಡಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರೆ ಒಪ್ಪುತ್ತಿದ್ದೆವು. ಆದರೆ, ನಮಗಿಂತ ಕಿರಿಯ‌ ವಯಸ್ಸಿನ ಬಿವೈ ವಿಜಯೇಂದ್ರ ಕೈ ಕೆಳಗೆ ಕೆಲಸ ಮಾಡೋದು ಹೇಗೆ? ರಾಜಾಧ್ಯಕ್ಷರ ನೇಮಕ ವಿಚಾರದಲ್ಲಿ ಇತರ ಹಿರಿಯರನ್ನ ಪರಿಗಣಿಸಬೇಕಿತ್ತು ಎಂದು ರಮೇಶ್ ಜಾರಕಿಹೊಳಿ ನೇರವಾಗಿ ವೀಕ್ಷಕರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೆ ಸಿಡಿದೆದ್ರಾ ಜಾರಕಿಹೊಳಿ ಬ್ರದರ್ಸ್?

ಬಿಜೆಪಿ ವರಿಷ್ಠರ ವಿರುದ್ಧ ಸಾಹುಕಾರ್ ಸಹೋದರರು ಸಮರ ಸಾರಿದರೇ ಎಂಬ ಪ್ರಶ್ನೆಗೆ ಇದೀಗ ವ್ಯಕ್ತವಾಗಿದೆ. ಈ ಹಿಂದೆ ಎರಡು ಬಾರಿ ಬಿಜೆಪಿ ಅಧಿಕಾರಕ್ಕೆ ತರಲು ಮಹತ್ವದ ಪಾತ್ರ ವಹಿಸಿದ್ದ ಸಹೋದರರು ಈಗ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವುದು ಪ್ರಶ್ನೆ ಮೂಡಲು ಕಾರಣವಾಗಿದೆ. ಇದೀಗ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ರಾಜ್ಯಾಧ್ಯಕ್ಷರ ಆಯ್ಕೆ ಮತ್ತು ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಪಕ್ಷದ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಲೋಕಸಭಾ ಚುನಾವಣೆ ಮೇಲೆ‌ ಪರಿಣಾಮ ಬೀರಲಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ವಿರೋಧ ಪಕ್ಷ ಸ್ಥಾನ ಉತ್ತರ ಕರ್ನಾಟಕದವರಿಗೆ ಸಿಗಬೇಕಿತ್ತೆಂದ ಅರವಿಂದ ಬೆಲ್ಲದ್: ಅಶೋಕ್ ನೇಮಕಕ್ಕೆ ಅಸಮಾಧಾನ

ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ ಬೆಲ್ಲದ ಕೂಡ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಉತ್ತರ ಕರ್ನಾಟಕ ಭಾಗದವರಿಗೇ ವಿಪಕ್ಷ ನಾಯಕನ ಸ್ಥಾನ ಸಿಗಬೇಕೆಂದು ಇಬ್ಬರೂ ಪಟ್ಟು ಹಿಡಿದಿದ್ದರು. ಈ ವಿಚಾರವಾಗಿ ಕೇಂದ್ರದ ವೀಕ್ಷಕರ ಜತೆ ಯತ್ನಾಳ್ ಮಾತುಕತೆ ನಡೆಸಿದ್ದರು. ಆದರೆ, ವರಿಷ್ಠರ ನಿರ್ಧಾರ ಖಚಿತವಾಗುತ್ತಿದ್ದಂತೆಯೇ ಸಿಟ್ಟಿನಿಂದ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಭಾಗವಹಿಸದೇ ತೆರಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ ಕೆಂಪೇಗೌಡರ ಶಾಪ ತಟ್ಟತ್ತೆ ಎಂದ ಬಿಜೆಪಿ
ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ ಕೆಂಪೇಗೌಡರ ಶಾಪ ತಟ್ಟತ್ತೆ ಎಂದ ಬಿಜೆಪಿ
ಬೆಳಗಾವಿ: ನೆರೆಯ ಜೊತೆಗೆ ನದಿ ತೀರದ ಜನರಿಗೆ ಶುರುವಾಯ್ತು ಮೊಸಳೆಗಳ ಆತಂಕ
ಬೆಳಗಾವಿ: ನೆರೆಯ ಜೊತೆಗೆ ನದಿ ತೀರದ ಜನರಿಗೆ ಶುರುವಾಯ್ತು ಮೊಸಳೆಗಳ ಆತಂಕ
ಸದನದಲ್ಲಿ ತುಳು ಭಾಷೆ ಅಬ್ಬರ: ಇದೇನು ಮಂಗಳೂರು ಅಧಿವೇಶನವಾ ಎಂದ ಆರ್​ ಅಶೋಕ್
ಸದನದಲ್ಲಿ ತುಳು ಭಾಷೆ ಅಬ್ಬರ: ಇದೇನು ಮಂಗಳೂರು ಅಧಿವೇಶನವಾ ಎಂದ ಆರ್​ ಅಶೋಕ್
ಮಾಜಿ ಸಿಎಂಗಳಾದ ಬೊಮ್ಮಾಯಿ ಮತ್ತು ಕುಮಾರಸ್ವಾಮಿಯವರದ್ದು ಒಂದೇ ಮಾತು!
ಮಾಜಿ ಸಿಎಂಗಳಾದ ಬೊಮ್ಮಾಯಿ ಮತ್ತು ಕುಮಾರಸ್ವಾಮಿಯವರದ್ದು ಒಂದೇ ಮಾತು!
ದರ್ಶನ್​ ನೋಡಲು ಬಂದ ಸಾಧು ಕೋಕಿಲ ಈ ರೀತಿ ರಿಯಾಕ್ಷನ್​ ಕೊಟ್ಟಿದ್ದು ಯಾಕೆ?
ದರ್ಶನ್​ ನೋಡಲು ಬಂದ ಸಾಧು ಕೋಕಿಲ ಈ ರೀತಿ ರಿಯಾಕ್ಷನ್​ ಕೊಟ್ಟಿದ್ದು ಯಾಕೆ?
ಶಿವಕುಮಾರ್ ಮಾತು ಮತ್ತು ಕೃತಿ ನಡುವೆ ಅಜಗಜಾಂತರ ವ್ಯತ್ಯಾಸ: ಆಶ್ವಥ್ ನಾರಾಯಣ
ಶಿವಕುಮಾರ್ ಮಾತು ಮತ್ತು ಕೃತಿ ನಡುವೆ ಅಜಗಜಾಂತರ ವ್ಯತ್ಯಾಸ: ಆಶ್ವಥ್ ನಾರಾಯಣ
ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ;ಸಿಎಂ
ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ;ಸಿಎಂ
ಕನ್ನಡಿಗರಿಗೆ ಮೋಸ ಮಾಡಿದ ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಲ್ಲಿಸಲಿ: ವಾಟಾಳ್
ಕನ್ನಡಿಗರಿಗೆ ಮೋಸ ಮಾಡಿದ ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಲ್ಲಿಸಲಿ: ವಾಟಾಳ್
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಶಿವಭಕ್ತನ ಪ್ರಾಣ ಉಳಿಸಿದ ಮುಸ್ಲಿಂ ಯೋಧ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಶಿವಭಕ್ತನ ಪ್ರಾಣ ಉಳಿಸಿದ ಮುಸ್ಲಿಂ ಯೋಧ
ನಾನು ಓಡಿ ಹೋಗಲ್ಲ, ಹಾಸನದ ರಾಜಕಾರಣ ಎಂದಿನಂತೆ ನಡೆಯಲಿದೆ: ಸೂರಜ್ ರೇವಣ್ಣ
ನಾನು ಓಡಿ ಹೋಗಲ್ಲ, ಹಾಸನದ ರಾಜಕಾರಣ ಎಂದಿನಂತೆ ನಡೆಯಲಿದೆ: ಸೂರಜ್ ರೇವಣ್ಣ