AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರೋಧ ಪಕ್ಷ ಸ್ಥಾನ ಉತ್ತರ ಕರ್ನಾಟಕದವರಿಗೆ ಸಿಗಬೇಕಿತ್ತೆಂದ ಅರವಿಂದ ಬೆಲ್ಲದ್: ಅಶೋಕ್ ನೇಮಕಕ್ಕೆ ಅಸಮಾಧಾನ

ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಕೇಂದ್ರದಿಂದ ಆಗಮಿಸಿದ್ದ ವೀಕ್ಷಕರ ಬಳಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನವೇ ಬೆಲ್ಲದ ಅಭಿಪ್ರಾಯ ತಿಳಿಸಿದ್ದರು. ಆ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಜತೆ ತೆರಳಿದ್ದರು. ಆದರೆ ನಂತರ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದರು.

ವಿರೋಧ ಪಕ್ಷ ಸ್ಥಾನ ಉತ್ತರ ಕರ್ನಾಟಕದವರಿಗೆ ಸಿಗಬೇಕಿತ್ತೆಂದ ಅರವಿಂದ ಬೆಲ್ಲದ್: ಅಶೋಕ್ ನೇಮಕಕ್ಕೆ ಅಸಮಾಧಾನ
ಅರವಿಂದ ಬೆಲ್ಲದ್
Follow us
ಕಿರಣ್​ ಹನಿಯಡ್ಕ
| Updated By: Ganapathi Sharma

Updated on: Nov 17, 2023 | 10:01 PM

ಬೆಂಗಳೂರು, ನವೆಂಬರ್ 17: ವಿಧಾನಸಭೆ ಪ್ರತಿಪಕ್ಷ ಸ್ಥಾನಕ್ಕೆ ಆಯ್ಕೆ ಮಾಡುವಾಗ ಉತ್ತರ ಕರ್ನಾಟಕ ಪ್ರದೇಶದವರಿಗೆ ಆದ್ಯತೆ ನೀಡಬೇಕಿತ್ತು ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹೇಳಿದರು. ವಿಪಕ್ಷ ನಾಯಕನನ್ನಾಗಿ ಆರ್ ಅಶೋಕ ಅವರ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿದ ಬೆಲ್ಲದ, ಉತ್ತರ ಕರ್ನಾಟಕ ಭಾಗಕ್ಕೆ ಮಾನ್ಯತೆ ಸಿಗಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ​ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರಿಬ್ಬರೂ ದಕ್ಷಿಣ ಕರ್ನಾಟಕದವರು. ಹೀಗಾಗಿ ಮೊದಲೇ ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೆವು. ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ನಾವು ಒಗ್ಗಟ್ಟಿನ ಕೆಲಸ ಮಾಡುತ್ತೇವೆ. ಮುಂದೆ ಗೆಲುವು ಸಾಧಿಸಿದರೆ ಅದು ವೈಯಕ್ತಿಕ ಗೆಲುವು ಆಗುವುದಿಲ್ಲ. ಅದು ಸಾಮೂಹಿಕ ಗೆಲುವು ಆಗುತ್ತದೆ ಎಂದು ಅರವಿಂದ ಬೆಲ್ಲದ್ ಹೇಳಿದ್ದಾರೆ.

ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಕೇಂದ್ರದಿಂದ ಆಗಮಿಸಿದ್ದ ವೀಕ್ಷಕರ ಬಳಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನವೇ ಬೆಲ್ಲದ ಅಭಿಪ್ರಾಯ ತಿಳಿಸಿದ್ದರು. ಆ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಜತೆ ತೆರಳಿದ್ದರು. ಆದರೆ ನಂತರ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದರು.

ಇದನ್ನೂ ಓದಿ: ಆರ್ ಅಶೋಕ ಪ್ರತಿಪಕ್ಷ ನಾಯಕ: ಒಕ್ಕಲಿಗ ನಾಯಕನಿಗೆ ಮಣೆ ಹಾಕಿದ ಬಿಜೆಪಿ ಹೈಕಮಾಂಡ್

ಶಾಸಕಾಂಗ ಪಕ್ಷದ ಸಭೆಗೆ ಐವರು ಶಾಸಕರು ಗೈರು

ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಐವರು ಶಾಸಕರು ಗೈರಾಗಿದ್ದಾರೆ. ಒಟ್ಟು 66 ಶಾಸಕರ ಪೈಕಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಗೈರಾಗಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ