Chikmagalur: ಎನ್ ಆರ್ ಪುರ ಭದ್ರಾ ಹಿನ್ನೀರು ಪ್ರದೇಶದಲ್ಲಿ ಬೀಡು ಬಿಟ್ಟ ಅನೆ ಹಿಂಡು, ಆತಂಕಗೊಂಡ ಸ್ಥಳೀಯರು

Updated on: Jul 07, 2023 | 11:31 AM

ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಆನೆಗಳ ಹಿಂಡನ್ನು ಕಾಡಿಗಟ್ಟಲು ಸಾಕಷ್ಟು ಶ್ರಮ ಪಡಬೇಕಾಯಿತಂತೆ.

ಚಿಕ್ಕಮಗಳೂರು: ಪಳಗಿಸಿದ ಆನೆಗಳು (tamed elephants) ಸೌಮ್ಯವಾಗಿರುತ್ತವೆ ಅನ್ನೋದು ನಿಸ್ಸಂಶಯ ಆದರೆ ಕಾಡಿನಲ್ಲಿರುವ ಅನೆಗಳಿಗೆ ಈ ಮಾತಿ ಅನ್ವಯಿಸದು. ಕಾಡಾನೆಗಳು (wild elephants) ನಾಡಿಗೆ ನುಗ್ಗಿ ಆಮಾಯಕರನ್ನು ಬಲಿ ತೆಗೆದುಕೊಂಡ ಅನೇಕ ಪ್ರಕರಣಗಳು ನಮಗೆ ಗೊತ್ತಿವೆ. ಹಾಗಾಗಿ, ಕಾಡಾನೆಗಳನ್ನು ನೋಡಿದಾಕ್ಷಣ ಎಂಟೆದೆಯವರಿಗೂ ದಿಗಿಲಾಗುತ್ತದೆ, ಭಯವಾಗುತ್ತದೆ, ಆತಂಕ ಹುಟ್ಟಿಕೊಳ್ಳುತ್ತದೆ. ಜಿಲ್ಲೆಯ ಎನ್ ಆರ್ ಪುರಕ್ಕೆ ಹತ್ತಿರವಿರುವ ಭದ್ರಾ ಹಿನ್ನೀರು (Bhadra Backwaters) ಪ್ರದೇಶದಲ್ಲಿ ಕಾಡಾನೆಗಳ ಬೀಡು ಬಿಟ್ಟಿದ್ದರಿಂದ ಸ್ಥಳೀಯರಲ್ಲಿ ಸಹಜವಾಗೇ ಆತಂಕ ಉಂಟಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಆನೆಗಳ ಹಿಂಡನ್ನು ಕಾಡಿಗಟ್ಟಲು ಸಾಕಷ್ಟು ಶ್ರಮ ಪಡಬೇಕಾಯಿತಂತೆ. ವಿಡಿಯೋದಲ್ಲಿ ಗೋಚರಿಸುತ್ತಿರುವ ಆನೆಗಳನ್ನು ಹಿಂಡು ಅನ್ನೋದಕ್ಕಿಂತ ಒಂದು ಕುಟುಂಬ ಅಂತ ಹೇಳಿದರೆ ಹೆಚ್ಚು ಸೂಕ್ತವಾದೀತು. ಅಲ್ಲಿ ಒಟ್ಟು 5 ಆನೆಗಳಿವೆ-ಎರಡು ಮರಿಯಾನೆಗಳ ಜೊತೆ ಮಮ್ಮಿ-ಡ್ಯಾಡಿ ಮತ್ತೊಂದು ಅಂಕಲ್ ಅಥವಾ ಆಂಟಿ ಇರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More