ಮೂಡಿಗೆರೆಯ ಹಲವು ಗ್ರಾಮಗಳಲ್ಲಿ ಮುಂದುವರೆದ ಕಾಡಾನೆಗಳ ಉಪಟಳ; ವಿಡಿಯೋ ಇಲ್ಲಿದೆ

ಮೂಡಿಗೆರೆಯ ಹಲವು ಗ್ರಾಮಗಳಲ್ಲಿ ಮುಂದುವರೆದ ಕಾಡಾನೆಗಳ ಉಪಟಳ; ವಿಡಿಯೋ ಇಲ್ಲಿದೆ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 05, 2023 | 9:27 AM

ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಉಪಟಳ ಮುಂದುವರೆದಿದ್ದು, ತಾಲೂಕಿನ ಬಡವನದಿಣ್ಣೆ ಗ್ರಾಮದಲ್ಲಿ ಬೀಡು ಬಿಟ್ಟಿವೆ. ಕಾಡಾನೆ ದಾಂಧಲೆಗೆ ಲಕ್ಷಾಂತರ ಮೌಲ್ಯದ ಕಾಫಿ ಮೆಣಸು, ಅಡಿಕೆ, ಬಾಳೆ ನಾಶವಾಗಿದೆ.

ಚಿಕ್ಕಮಗಳೂರು, ಆ.5: ಮೂಡಿಗೆರೆ(Mudigere) ತಾಲೂಕಿನಲ್ಲಿ ಕಾಡಾನೆ ಉಪಟಳ ಮುಂದುವರೆದಿದ್ದು, ತಾಲೂಕಿನ ಬಡವನದಿಣ್ಣೆ ಗ್ರಾಮದಲ್ಲಿ ಬೀಡು ಬಿಟ್ಟಿವೆ. ಕಾಡಾನೆ ದಾಂಧಲೆಗೆ ಲಕ್ಷಾಂತರ ಮೌಲ್ಯದ ಕಾಫಿ ಮೆಣಸು, ಅಡಿಕೆ, ಬಾಳೆ ನಾಶವಾಗಿದ್ದು, ಬಡವನದಿಣ್ಣೆ, ಮೇಗೂರು,ಮಲೆಮನೆ, ಸುಂದರಬೈಲ್ ಬಾಳೂರು ಗ್ರಾಮಗಳಲ್ಲಿ ಆನೆಗಳು ಸಂಚಾರ ಮಾಡುತ್ತಿದೆ. ಇನ್ನು ನಿರಂತರವಾಗಿ ಕಾಫಿ ತೋಟದಲ್ಲಿ ಬೆಳೆ ನಾಶ ಮಾಡುತ್ತಿರುವ ಕಾಡಾನೆಗಳಿಂದ ಕಾಫಿ ತೋಟಕ್ಕೆ ಕೆಲಸಕ್ಕೆ ಬರಲು ಕಾರ್ಮಿಕರ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನಲೆ ಕಾಡಾನೆ ಸ್ಥಳಾಂತರ ಮಾಡುವಂತೆ ಸರ್ಕಾರಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 05, 2023 09:27 AM