ಕಬಿನಿ‌ ಹಿನ್ನೀರಿನ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಆನೆಗಳ ಜಲಕ್ರೀಡೆ

|

Updated on: Jul 29, 2024 | 1:33 PM

ಕಬಿನಿ‌ ಹಿನ್ನೀರಿನ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ತುಂಬಿದ ಕೆರೆಯಲ್ಲಿ ಆನೆಗಳು ಜಲಕ್ರೀಡೆ ಆಡಿವೆ. ಕೆರೆಯಲ್ಲಿನ ಆನೆಗಳ ಆಟ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆನೆ ಹಾಗೂ ಆನೆ ಮರಿ ಕಂಡು ಪ್ರವಾಸಿಗರು ಖುಷಿಯಾಗಿದ್ದಾರೆ.

ಕಬಿನಿ ಜಲಾಶಯದಿಂದ (Kabini Dam) ಕಳೆದ ಹದಿನೈದು ದಿನಗಳಿಂದ 40 ಸಾವಿರದಿಂದ 70ಸಾವಿರ ಕ್ಯುಸೆಕ್ಸ್ ನೀರನ್ನು ಜಲಾಶಯದಿಂದ ಕಪಿಲಾ ನದಿಗೆ (Kapila River) ಬಿಡಲಾಗುತ್ತಿದೆ. ಈ ಮನಮೋಹಕ ದೃಶ್ಯವನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಹಿನ್ನೀರಿನ ಪ್ರಮುಖ ದೇವಾಲಯಗಳಾದ ಭೀಮನಕೊಲ್ಲಿ ಮಹದೇಶ್ವರ ದೇವಾಲಯ, ತೆರಣಿಮುಂಟಿ ಗ್ರಾಮದ ರವಿ ರಾಮೇಶ್ವರ ದೇವಾಲಯಗಳ ಸಮೀಪ ನೀರು ಬಂದಿದ್ದು, ಈ ಮನಮೋಹಕ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಿದ್ದಾರೆ.

ಕಬಿನಿ‌ ಹಿನ್ನೀರಿನ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ತುಂಬಿದ ಕೆರೆಯಲ್ಲಿ ಆನೆಗಳು (Elephant) ಜಲಕ್ರೀಡೆ ಆಡಿವೆ. ಕೆರೆಯಲ್ಲಿನ ಆನೆಗಳ ಆಟ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆನೆ ಹಾಗೂ ಆನೆ ಮರಿ ಕಂಡು ಪ್ರವಾಸಿಗರು ಖುಷಿಯಾಗಿದ್ದಾರೆ.

ಇದನ್ನೂ ಓದಿ: ಮೈಲಾರಿ ಹೊಟೇಲ್​​ನಲ್ಲಿ ಬಿಸಿ ಬಿಸಿ ದೋಸೆ ಸವಿದ ಸಿಎಂ ಸಿದ್ದರಾಮಯ್ಯ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ