ಮೈಲಾರಿ ಹೊಟೇಲ್​​ನಲ್ಲಿ ಬಿಸಿ ಬಿಸಿ ದೋಸೆ ಸವಿದ ಸಿಎಂ ಸಿದ್ದರಾಮಯ್ಯ

ಮೈಲಾರಿ ಹೊಟೇಲ್​​ನಲ್ಲಿ ಬಿಸಿ ಬಿಸಿ ದೋಸೆ ಸವಿದ ಸಿಎಂ ಸಿದ್ದರಾಮಯ್ಯ

ಅಕ್ಷಯ್​ ಪಲ್ಲಮಜಲು​​
|

Updated on: Jul 29, 2024 | 1:00 PM

ಇದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನ ಕೆಎಸ್​ಆರ್​​​​ ಡ್ಯಾಂಗೆ ಬಾಗಿನ ನೀಡಲು ಬಂದಿದ್ದಾರೆ. ಈ ವೇಳೆ ದಾರಿಯಲ್ಲಿ ಮೈಲಾರಿ ಹೊಟೇಲ್​​ಗೆ ಬಂತು ದೋಸೆ ತಿಂದಿದ್ದಾರೆ. ಪ್ರತಿ ಬಾರಿ ಸಿದ್ದರಾಮಯ ಮೈಸೂರಿಗೆ ಬಂದಾಗ ಇಲ್ಲಿಯೇ ತಿಂಡಿ ಮಾಡುತ್ತಾರೆ. ಈ ಬಗ್ಗೆ ವಿಡಿಯೋ ಇಲ್ಲಿದೆ ನೋಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೈಸೂರಿನ ಮೈಲಾರಿ ಹೊಟೇಲ್​ಗೆ ಬಂದು ದೋಸೆ ತಿಂದಿದ್ದಾರೆ. ಸಾಮಾನ್ಯರಂತೆ ಎಲ್ಲರ ಜತೆಗೆ ಕೂತು ದೋಸೆ ತಿಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಬಂದಾಗಲೆಲ್ಲ ಮೈಲಾರಿ ಹೊಟೇಲ್​​ನಲ್ಲಿ ಬ್ರೇಕ್​ಫಾಸ್ಟ್ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯ ಜತೆಗೆ ಅವರ ಬೆಂಗಲಿಗರು ಕೂಡ ಅವರಿಗೆ ಸಾಥ್​​​ ನೀಡಿದರು. ಸಚಿವ ಚೆಲುವರಾಯಸ್ವಾಮಿ ಕೂಡ ಮೈಲಾರಿ ಹೊಟೇಲ್​​ನಲ್ಲಿ ತಿಂಡಿ ಮಾಡಿದ್ದಾರೆ. ತಿಂಡಿ ಸೇವಿಸಿ ಅಲ್ಲಿಂದ ಸಿಎಂ ಸಿದ್ದರಾಮಯ್ಯ ಕೆಎಸ್​​ಆರ್​​​ ಡ್ಯಾಂಗೆ ಬಾಗಿನ ಅರ್ಪಿಸಲು ಹೋಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.