ಬಿಗ್ ಬಾಸ್​ ಸ್ಪರ್ಧಿಗಳಿಗೆ ಮನೆಯಿಂದ ಬಂತು ಬ್ಲ್ಯಾಂಕ್ ಪತ್ರ; ಕಣ್ಣೀರು ಹಾಕಿದ ಸ್ಪರ್ಧಿಗಳು

Updated on: Nov 03, 2026 | 8:29 AM

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಕುಟುಂಬದವರ ನೆನಪಿನ ಅಲೆ ಎದ್ದಿದ್ದು, ತವರು ಮನೆಯಿಂದ ಬಂದ ಭಾವನಾತ್ಮಕ ಪತ್ರಗಳನ್ನು ಓದಿ ಸ್ಪರ್ಧಿಗಳು ಕಣ್ಣೀರಿಟ್ಟಿದ್ದಾರೆ. ಅಂಚೆಪೆಟ್ಟಿಗೆಯಿಂದ ಪತ್ರ ಪಡೆದ ಸ್ಪರ್ಧಿಗಳು ಭಾವುಕರಾಗಿ ಅತ್ತಿರುವ ದೃಶ್ಯಗಳು ಇಂದಿನ ಸಂಚಿಕೆಯ ಹೈಲೈಟ್ ಆಗಿರಲಿದೆ. ಆ ಬಗ್ಗೆ ಇಲ್ಲಿದೆ ವಿವರ.  

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ಆಟ ಹಾಗೂ ಭಾವನೆಗಳ ಪರೀಕ್ಷೆ ಮುಂದುವರಿದಿದೆ. ಮನೆಯೊಳಗೆ ಸದಾ ಜಟಾಪಟಿ, ಟಾಸ್ಕ್ ಹಾಗೂ ಮನಸ್ತಾಪಗಳಲ್ಲಿ ತೊಡಗಿರುತ್ತಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ಈ ಬಾರಿ ಅತಿ ದೊಡ್ಡ ಭಾವುಕ ಉಡುಗೊರೆಯೊಂದನ್ನು ನೀಡಿದ್ದಾರೆ. ಮನೆಯಿಂದ ದೂರವಿರುವ ಸ್ಪರ್ಧಿಗಳ ಮನಸ್ಸಿಗೆ ಮುಟ್ಟುವ ಸನ್ನಿವೇಶವೊಂದು ನಿರ್ಮಾಣವಾಗಿದ್ದು, ಪ್ರೋಮೋ ಬಿಡುಗಡೆಯಾಗಿದೆ.

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ವಿಶೇಷವಾದ ಟಾಸ್ಕ್ ಆಯೋಜನೆಗೊಂಡಿದೆ. ಮನೆಯ ಅಂಚೆಪೆಟ್ಟಿಗೆಯನ್ನು ತೆರೆದು, ಕುಟುಂಬದವರಿಂದ ಬಂದಿರುವ ಪ್ರೀತಿಯ ಪತ್ರಗಳನ್ನು ಪಡೆದುಕೊಳ್ಳುವ ಅವಕಾಶವನ್ನು ಸ್ಪರ್ಧಿಗಳಿಗೆ ನೀಡಲಾಗಿದೆ. ಪತ್ರಗಳು ಬ್ಲ್ಯಾಂಕ್ ಇದ್ದು, ಟಾಸ್ಕ್ ಗೆದ್ದು ಅದನ್ನು ಪಡೆದುಕೊಳ್ಳಬೇಕು. ಹೀಗಾಗಿ, ಹೆಚ್ಚಿನ ಜಟಾಪಟಿ ನಿರೀಕ್ಷೆ ಮಾಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More