‘ನಾವು ಹೋಗಲು ಬಿಡಲ್ಲ’: ಶಾಲೆ ಗೇಟ್ ಬಂದ್ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಕರ್ನಾಟಕದ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಮುಖ್ಯ ಶಿಕ್ಷಕರ ವರ್ಗಾವಣೆ ವಿರೋಧಿಸಿ ಭಾವುಕ ಪ್ರತಿಭಟನೆ ನಡೆಸಿದ್ದಾರೆ. ಶಾಲಾ ಗೇಟ್ ಬಂದ್ ಮಾಡಿದ ಮಕ್ಕಳು, ಶಿಕ್ಷಕರನ್ನು ಕಳುಹಿಸಬಾರದೆಂದು ಕಣ್ಣೀರಿಟ್ಟು ಬೇಡಿಕೊಂಡರು. ವೀರಪ್ಪ ಸರ್ ಬೇಕೇ ಬೇಕು ಎಂದು ಪಟ್ಟು ಹಿಡಿದು ನಿಂತಿದ್ದು, ತಮ್ಮ ಗುರುಗಳ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು.
ಕೊಪ್ಪಳ, ಜ.3: ಕೊಪ್ಪಳ ತಾಲೂಕಿನ ಬಹದ್ದೂರ ಬಂಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲಾ ಗೇಟ್ ಬಂದ್ ಮಾಡಿ ಭಾವುಕರಾಗಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ನೆಚ್ಚಿನ ಶಿಕ್ಷಕರಾದ ವೀರಪ್ಪ ಅವರನ್ನು ಶಾಲೆಯಿಂದ ಹೊರಗೆ ಹೋಗದಂತೆ ಕಣ್ಣೀರು ಹಾಕಿದ್ದಾರೆ. “ನಾವು ಹೋಗಲ್ಲ, ಸರ್ ಬರಬೇಕು,” ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಈ ಬಗ್ಗೆ ಪೊಷಕರೊಬ್ಬರು ಮಾತನಾಡಿದ್ದಾರೆ. ವೀರಪ್ಪ ಸರ್ ಅವರು ನಮ್ಮ ಮಕ್ಕಳನ್ನು ಅವರ ಮನೆಯ ಮಕ್ಕಳಿಗಿಂತ ಹೆಚ್ಚಾಗಿ ನೋಡ್ಕೊಂಡಿದ್ದಾರೆ. ನಮ್ಮ ಮಕ್ಕಳು ಅವರ ಪ್ರೀತಿಗೆ ಸೋತಿದ್ದಾರೆ. ಜತೆಗೆ ನಮ್ಮ ಮಕ್ಕಳು ಉದ್ದಾರ ಆಗಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಮಕ್ಕಳ ಕಣ್ಣೀರು ನೋಡಿ ಶಿಕ್ಷಕರು ನಾಳೆ ಶಾಲೆಗೆ ಬರುವುದಾಗಿ ಭರವಸೆ ನೀಡಿದ್ದಾರೆ. ನಾಳೆ ನೀವು ಶಾಲೆಗೆ ಬರದಿದ್ದರೆ ನಾವು ಕೂಡ ನಾಳೆ ಶಾಲೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ .
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
