300 ಗ್ರಾಂ ಚಿನ್ನಾಭರಣಗಳಿದ್ದ ಬ್ಯಾಗನ್ನು ವಾರಸುದಾರರಿಗೆ ವಾಪಸ್ಸು ತಲುಪಿಸಿದರು ನ್ಯಾಯಾಲಯದಲ್ಲಿ ಎಫ್ ಡಿಎ ಆಗಿರುವ ಗುರುರಾಜ್
ಗುರುರಾಜ್ ಅವರ ಪ್ರಾಮಾಣಿಕತೆಯಿಂದ ಅರ್ಪಿತಾ (Arpita) ಕುಟುಂಬದ ಸದಸ್ಯರು ದಿಗ್ಮೂಢರಾಗಿದ್ದು ನಿಜ ಮಾರಾಯ್ರೇ. ಯಾಕೆ ಗೊತ್ತಾ? ಆ ಬ್ಯಾಗಲ್ಲಿ ಅವರಿಗೆ ಸೇರಿದ 300 ಗ್ರಾಂ ನಷ್ಟು ಚಿನ್ನದ ಆಭರಣಗಳಿದ್ದವು.
ತುಮಕೂರು: ಬಸ್ ನಿಲ್ದಾಣ, ರೇಲ್ವೇ ಸ್ಟೇಶನಲ್ಲಿ ವಾರಸುದಾರರಿಲ್ಲದ ಅನಾಥವಾಗಿ ಬಿದ್ದ ಬ್ಯಾಗ್, ಸೂಟ್ ಕೇಸ್ ಕಂಡರೆ ಬಾಂಬ್ (Bomb) ಇರಬಹುದಾ ಶಂಕಿಸಿ ಯಾರೂ ಅದರ ಹತ್ತಿರಕ್ಕೂ ಹೋಗುವುದಿಲ್ಲ. ಆದರೆ ತುಮಕೂರು ನ್ಯಾಯಾಲಯದಲ್ಲಿ ಎಫ್ ಡಿ ಆಗಿ ಕೆಲಸ ಮಾಡುವ ಗುರುರಾಜ್ (Gururaj) ಅವರು ಶಿವಮೊಗ್ಗ ರೇಲ್ವೇ ನಿಲ್ದಾಣದಲ್ಲಿ ಅನಾಥವಾಗಿ ಬಿದ್ದಿದ್ದ ಬ್ಯಾಗೊಂದನ್ನು ಗಮನಿಸಿ ಅದನ್ನು ಎತ್ತಿಕೊಂಡು ಪೊಲೀಸ್ ಮತ್ತು ಮಾಧ್ಯಮದವರ ಸಹಾಯದಿಂದ ಅಸಲಿ ವಾರಸುದಾರರಾದ ಶಿವಮೊಗ್ಗದ ವಿನೋಬಾ ನಗರದ ನಿವಾಸಿ ಅರ್ಪಿತಾ ಅವರ ಕುಟುಂಬಕ್ಕೆ ತಲುಪಿಸಿದ್ದಾರೆ. ಗುರುರಾಜ್ ಅವರ ಪ್ರಾಮಾಣಿಕತೆಯಿಂದ ಅರ್ಪಿತಾ (Arpita) ಕುಟುಂಬದ ಸದಸ್ಯರು ದಿಗ್ಮೂಢರಾಗಿದ್ದು ನಿಜ ಮಾರಾಯ್ರೇ. ಯಾಕೆ ಗೊತ್ತಾ? ಆ ಬ್ಯಾಗಲ್ಲಿ ಅವರಿಗೆ ಸೇರಿದ 300 ಗ್ರಾಂ ನಷ್ಟು ಚಿನ್ನದ ಆಭರಣಗಳಿದ್ದವು.
Latest Videos