ವಿಳಂಬ ಕಾಮಗಾರಿಯಿಂದ ಸಿಡಿಮಿಡಿಗೊಂಡ ಸಚಿವ ಸೋಮಣ್ಣ ಅಧಿಕಾರಿಗಳ ಮೇಲೆ ಸಾರ್ವಜನಿಕವಾಗಿ ರೇಗಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 17, 2022 | 3:23 PM

ಇದು ಚುನಾವಣಾ ವರ್ಷವಾಗಿರುವುದರಿಂದ ಜಾರಿಯಲ್ಲಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸುವ ಇರಾದೆ ಸರ್ಕಾರಕ್ಕಿರುವಂತಿದೆ.

ಬೆಂಗಳೂರು: ವಸತಿ ಖಾತೆ ಸಚಿವ ವಿ ಸೋಮಣ್ಣನವರು (V Somanna) ಬುಧವಾರ ಬೆಳಗ್ಗೆ ಯಲಹಂಕದಲ್ಲಿ ನಡೆಯುತ್ತಿರುವ ವಸತಿ ಸಮುಚ್ಛಯದ (housing complex) ಕಾಮಗಾರಿ ವೀಕ್ಷಿಸಿದರು. ಕಾಮಗಾರಿ ವಿಳಂಬಗೊಂಡಿರುವುದಕ್ಕೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಆವರನ್ನು ಸಾರ್ವಜನಿಕವಾಗಿ (publicly) ತರಾಟೆಗೆ ತೆಗೆದುಕೊಂಡರು. ಇದು ಚುನಾವಣಾ ವರ್ಷವಾಗಿರುವುದರಿಂದ ಜಾರಿಯಲ್ಲಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸುವ ಇರಾದೆ ಸರ್ಕಾರಕ್ಕಿರುವಂತಿದೆ.