ಸಿದ್ದರಾಮಯ್ಯ ಕುರಿತು ನಾನು ನೀಡಿದ ಹೇಳಿಕೆಗಳಿಗೆ ವಿಪರೀತ ಅರ್ಥ ಕಲ್ಪಿಸಲಾಗುತ್ತಿದೆ: ಬಿ ಶ್ರೀರಾಮುಲು

ಸಿದ್ದರಾಮಯ್ಯ ಕುರಿತು ನಾನು ನೀಡಿದ ಹೇಳಿಕೆಗಳಿಗೆ ವಿಪರೀತ ಅರ್ಥ ಕಲ್ಪಿಸಲಾಗುತ್ತಿದೆ: ಬಿ ಶ್ರೀರಾಮುಲು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 17, 2022 | 2:51 PM

ತಾನು ಹೇಳಿರುವುದಕ್ಕೆ ವಿಪರೀತ ಅರ್ಥಗಳನ್ನು ಕಲ್ಪಿಸಲಾಗುತ್ತಿದೆ, ಅಂದಿದ್ದೇ ಒಂದು ವರದಿಯಾಗಿರುವುದು ಮತ್ತೊಂದು ಎಂದು ಅವರು ನಿನ್ನೆಯ ಪ್ಲೇಟ್ ಬದಲಾಯಿಸಿದರು.

ಬೆಂಗಳೂರು: ಸೋಮವಾರ ಮತ್ತು ಮಂಗಳವಾರ ಸಿದ್ದರಾಮಯ್ಯನವರ ಗುಣಗಾನ ಮಾಡುತ್ತಿದ್ದ ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಬುಧವಾರ ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ ಉಲ್ಟಾ ಹೊಡೆದರು. ತಾನು ಹೇಳಿರುವುದಕ್ಕೆ ವಿಪರೀತ ಅರ್ಥಗಳನ್ನು ಕಲ್ಪಿಸಲಾಗುತ್ತಿದೆ, ಅಂದಿದ್ದೇ ಒಂದು ವರದಿಯಾಗಿರುವುದು ಮತ್ತೊಂದು ಎಂದು ಅವರು ನಿನ್ನೆಯ ಪ್ಲೇಟ್ ಬದಲಾಯಿಸಿದರು. ಪ್ರಾಯಶಃ ಹೈಕಮಾಂಡ್ ನಿಂದ (high command) ಅವರಿಗೆ ಎಚ್ಚರಿಕೆ ರವಾನೆಯಾಗಿರಬಹುದು.