[lazy-load-videos-and-sticky-control id=”dTwEdLY1ctQ”]ಮಂಗಳೂರು: ಕೇರಳಿಗರು ಪ್ರತಿನಿತ್ಯ ಮಂಗಳೂರು ಪ್ರಯಾಣಿಸುವುದಕ್ಕೆ ಕೇರಳ ಸರ್ಕಾರ ನಿಷೇಧ ಹೊರಡಿಸಿರುವ ಹಿನ್ನೆಲೆಯಲ್ಲಿ ಕೇರಳದಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಜನರನ್ನ ತಡೆ ಹಿಡಿಯಲಾಗಿದೆ. ಸರ್ಕಾರದ ಆದೇಶದ ಮಾಹಿತಿಯಿಲ್ಲದೇ ಬಂದ ನೂರಾರು ಜನರನ್ನು ಕರ್ನಾಟಕ-ಕೇರಳ ರಾಜ್ಯದ ಗಡಿಭಾಗ ತಲಪಾಡಿಯಲ್ಲಿ ತಡೆಯಲಾಗಿದೆ.
ಉದ್ಯೋಗ ಮತ್ತು ವ್ಯಾಪಾರದ ಹಿನ್ನೆಲೆಯಲ್ಲಿ ದಿನದ ಪಾಸ್ ಪಡೆದು ನೂರಾರು ಕೇರಳಿಗರು ಮಂಗಳೂರಿಗೆ ಬಂದು ಹೋಗುತ್ತಿದ್ದರು. ದ.ಕ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ದಿನದ ಪಾಸ್ ರದ್ದು ಮಾಡಿದೆ. ಈ ಮಾಹಿತಿ ತಿಳಿಯದೆ ನೂರಾರು ಜನರು ಕೇರಳದ ಕಾಸರಗೋಡು, ಮಂಜೇಶ್ವರ ಭಾಗದಿಂದ ಆಗಮಿಸಿದ್ದಾರೆ. ಹೀಗಾಗಿ ಕೇರಳ ಪೊಲೀಸರು ಅವರನ್ನು ತಲಪಾಡಿ ಬಳಿ ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಕೆಲ ಕೇರಳಿಗರು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಇನ್ನೂ ಕೆಲ ಪ್ರಯಾಣಿಕರು ತಲಪಾಡಿ ಗಡಿಯಲ್ಲಿ ಅಸಹಾಯಕರಂತೆ ನಿಂತಿದ್ದಾರೆ.
Published On - 12:21 pm, Tue, 7 July 20