AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಕ್ಕೆ ಹೈಕೋರ್ಟ್​ನಿಂದ ಸಾಲು ಸಾಲು ಪ್ರಶ್ನೆ.. ಏನದು?

[lazy-load-videos-and-sticky-control id=”Yv_P7H64P_U”]ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಕಷ್ಟ ಹೆಚ್ಚುತ್ತಿದೆ. ಸರ್ಕಾರದ ಸ್ಪಷ್ಟ ನೀತಿ ಕೊರತೆಯಿಂದಾಗಿ ಚಿಕಿತ್ಸೆ ಸಿಗದೆ ಸೋಂಕಿತರು ಪರದಾಡ್ತಿದ್ದಾರೆ. ಈ ಮಧ್ಯೆ ಸಾರ್ವಜನಿಕರ ಸಂಕಷ್ಟ ಮನಗಂಡ ಹೈಕೋರ್ಟ್, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ ರಾಜ್ಯ ಸರ್ಕಾರದ ಮುಂದೆ ಪ್ರಶ್ನೆಗಳ ಸರಮಾಲೆಯನ್ನಿಟ್ಟಿದೆ. ಕೊರೊನಾ ಮಹಾಮಾರಿ ಮಿತಿಮೀತಿದೆ. ಸಾವಿನ ಸುಳಿ ಮರಣಮೃದಂಗವನ್ನೇ ಸೃಷ್ಟಿಸಿದೆ. ಸೋಂಕು ಹೆಚ್ಚಿದಂತೆಲ್ಲಾ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಹೆಚ್ಚಾಗಿದೆ. ಇದ್ರಿಂದ ಜೀವ ಉಳಿಸಿಕೊಳ್ಳೋಕೆ ರೋಗಿಗಳು ಹೆಣಗಾಡ್ತಿದ್ದಾರೆ. ಸರ್ಕಾರ ಏನೋ ಬೆಡ್​ಗಳ ವ್ಯವಸ್ಥೆ […]

ಸರ್ಕಾರಕ್ಕೆ ಹೈಕೋರ್ಟ್​ನಿಂದ ಸಾಲು ಸಾಲು ಪ್ರಶ್ನೆ.. ಏನದು?
ಕರ್ನಾಟಕ ಹೈಕೋರ್ಟ್​
ಆಯೇಷಾ ಬಾನು
| Updated By: |

Updated on:Jul 08, 2020 | 11:47 AM

Share

[lazy-load-videos-and-sticky-control id=”Yv_P7H64P_U”]ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಕಷ್ಟ ಹೆಚ್ಚುತ್ತಿದೆ. ಸರ್ಕಾರದ ಸ್ಪಷ್ಟ ನೀತಿ ಕೊರತೆಯಿಂದಾಗಿ ಚಿಕಿತ್ಸೆ ಸಿಗದೆ ಸೋಂಕಿತರು ಪರದಾಡ್ತಿದ್ದಾರೆ. ಈ ಮಧ್ಯೆ ಸಾರ್ವಜನಿಕರ ಸಂಕಷ್ಟ ಮನಗಂಡ ಹೈಕೋರ್ಟ್, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ ರಾಜ್ಯ ಸರ್ಕಾರದ ಮುಂದೆ ಪ್ರಶ್ನೆಗಳ ಸರಮಾಲೆಯನ್ನಿಟ್ಟಿದೆ.

ಕೊರೊನಾ ಮಹಾಮಾರಿ ಮಿತಿಮೀತಿದೆ. ಸಾವಿನ ಸುಳಿ ಮರಣಮೃದಂಗವನ್ನೇ ಸೃಷ್ಟಿಸಿದೆ. ಸೋಂಕು ಹೆಚ್ಚಿದಂತೆಲ್ಲಾ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಹೆಚ್ಚಾಗಿದೆ. ಇದ್ರಿಂದ ಜೀವ ಉಳಿಸಿಕೊಳ್ಳೋಕೆ ರೋಗಿಗಳು ಹೆಣಗಾಡ್ತಿದ್ದಾರೆ. ಸರ್ಕಾರ ಏನೋ ಬೆಡ್​ಗಳ ವ್ಯವಸ್ಥೆ ಮಾಡಿದ್ದೀನಿ ಅಂತಾ ಹೇಳ್ತಿದೆ. ಆದ್ರೆ ಸೋಂಕಿತರಿಗೆ ಮಾತ್ರ ಬೆಡ್​ಗಳು ಸಿಕ್ತಾನೇ ಇಲ್ಲ. ಇದ್ರ ಜೊತೆಗೆ ನಾನ್ ಕೊವಿಡ್ ಪೇಷೆಂಟ್​ಗಳಿಗೂ ಬೆಡ್ ಸಿಗದೆ ಸಂಕಷ್ಟ ಎದುರಾಗಿದೆ. ಈ ಬಗ್ಗೆ ಹೈಕೋರ್ಟ್​ಗೆ ಹಲವು ಸಂಘ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಪತ್ರ ಬರೆದಿದ್ದಾರೆ. ಅಲ್ಲದೆ ಪಿಐಎಲ್​ ಕೂಡ ದಾಖಲಿಸಿದ್ದಾರೆ. ನಿನ್ನೆ ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಸರ್ಕಾರಕ್ಕೆ ಹೈಕೋರ್ಟ್​ನಿಂದ ಸಾಲು ಸಾಲು ಪ್ರಶ್ನೆ! ಅಂದ್ಹಾಗೇ, ಕೊರೊನಾ ಅಬ್ಬರ ನಡ್ವೆ ಸಾರ್ವಜನಿಕರ ಪಿತ್ತನೆತ್ತಿಗೇರುವಂತೆ ಮಾಡಿರೋದು ಸರ್ಕಾರದ ವರ್ತನೆ. ಸರ್ಕಾರವೇನೋ ಬೆಡ್​ಗಳ ಕೊರತೆಯಿಲ್ಲ ಅನ್ನೋ ಭರವಸೆ ಕೊಡ್ತಿದೆ. ಆದ್ರೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಸೋಂಕಿತರು ಬೀದಿಹೆಣವಾಗಿ ಬೀಳ್ತಿದ್ದಾರೆ. ಹೀಗಾಗಿಯೇ ಸರ್ಕಾರದ ಮುಂದೆ ಹೈಕೋರ್ಟ್ ಹಲವು ಪ್ರಶ್ನೆಗಳನ್ನ ಮುಂದಿಟ್ಟಿದೆ. ಏನ್ ಆ ಪ್ರಶ್ನೆಗಳು ಅಂತಾ ನೋಡೋದಾದ್ರೆ.

ಸರ್ಕಾರಕ್ಕೆ ‘ಹೈ’ಕೋರ್ಟ್ ಪ್ರಶ್ನೆಗಳು: ಬೆಂಗಳೂರಿನಲ್ಲಿ ಐಸಿಯು, ವೆಂಟಿಲೇಟರ್ ಇರುವ ಬೆಡ್​ಗಳ ಸಂಖ್ಯೆ ಎಷ್ಟಿದೆ? ಆಸ್ಪತ್ರೆಗಳಲ್ಲಿರುವ ವೈದ್ಯರು, ನರ್ಸ್​ಗಳು, ಔಷಧಿಗಳ ಲಭ್ಯತೆಯ ವಿವರ ನೀಡಿ. ಪಾಸಿಟಿವ್ ಬಂದ ಮೇಲೆ ಆಸ್ಪತ್ರೆಯಲ್ಲಿ ಬೆಡ್ ಪಡೆಯುವ ಪ್ರಕ್ರಿಯೆ ಏನು? ಬೆಡ್ ಒಸಗಿಸುವ ಪ್ರಕ್ರಿಯೆ ಬಗ್ಗೆ ನಿಗಾವಹಿಸಲು ಪ್ರಾಧಿಕಾರ ರಚಿಸಲಾಗಿದೆಯೇ?

ಜನರಿಗೆ ಬೆಡ್ ಲಭ್ಯತೆಯ ಬಗ್ಗೆ ಹೇಗೆ ಮಾಹಿತಿಯನ್ನ ಒದಗಿಸುತ್ತಿದ್ದೀರಿ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಅಷ್ಟೇ ಅಲ್ಲದೆ ಌಂಬುಲೆನ್ಸ್​ಗಳ ಸಂಖ್ಯೆ ಎಷ್ಟಿದೆ? ಇದ್ರಲ್ಲಿ ಕೊವಿಡ್ 19ಗೆ ಮೀಸಲಾಗಿರುವುದೆಷ್ಟು? ತುರ್ತು ಌಂಬುಲೆನ್ಸ್ ಅಗತ್ಯವಿದ್ದರೆ ಅದನ್ನ ಹೇಗೆ ಪೂರೈಸುತ್ತಿದ್ದೀರಿ? ಮೃತದೇಹಗಳ ಅಂತ್ಯಕ್ರಿಯೆ ಮಾಡಲು ಅನುಸರಿಸುತ್ತಿರುವ ವಿಧಾನವೇನು? ಮೃತದೇಹದಿಂದ ಕೊರೊನಾ ಹರಡುತ್ತೆ ಅನ್ನೋದಕ್ಕೆ ವೈಜ್ಞಾನಿಕ ಪುರಾವೆ ಇದೆಯೇ? ಖಾಸಗಿ ಆಸ್ಪತ್ರೆಗಳ ಶುಲ್ಕದ ಮೇಲೆ ಸರ್ಕಾರಕ್ಕೆ ನಿಯಂತ್ರಣವಿದೆಯೇ? ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಅನುಷ್ಠಾನಗೊಳಿಸಲಾಗಿದೆಯೇ ಎಂದು ರಾಜ್ಯ ಸರ್ಕಾರವನ್ನ ಸಿಜೆ ಎ.ಎಸ್ ಒಕಾ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿದೆ.

ಇನ್ನು ವಿಕ್ಟೋರಿಯಾ ಆಸ್ಪತ್ರೆ ಮುಂದೆ ಚಿಕಿತ್ಸೆ ಸಿಗದೆ ರೋಗಿಗಳು ಸಾವನ್ನಪ್ಪಿದ ವರದಿಗಳ ಬಗ್ಗೆಯೂ ತನಿಖೆಗೂ ಹೈಕೋರ್ಟ್ ಸೂಚಿಸಿದೆ. ಕೊರೊನಾ ಸೋಂಕಿತರ ಚಿಕಿತ್ಸೆ ಬಗ್ಗೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್, ವಕೀಲರಾದ ಅನು ಚೆಂಗಪ್ಪ, ಗೀತಾ ಮಿಶ್ರಾ ಸೇರಿದಂತೆ ಹಲವ್ರು ಹೈಕೋರ್ಟ್​ಗೆ ಪತ್ರ ಬರೆದಿದ್ರು. ಅಲ್ಲದೆ ಕೇಸ್ ದಾಖಲಿಸಿದ್ರು. ಹೈಕೋರ್ಟ್ ಕೂಡ ಸ್ವಯಂಪ್ರೇರಿತವಾಗಿ ಪಿಐಎಲ್ ದಾಖಲಿಸಿಕೊಂಡಿದ್ದು, ಜುಲೈ 9ರಂದು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವಂತೆ ಸೂಚಿಸಿದೆ.

ಒಟ್ನಲ್ಲಿ ಸೋಂಕಿತರ ಪರವಾಗಿ ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದೆ. ಹೈಕೋರ್ಟ್ ಪ್ರಯತ್ನದಿಂದಾದ್ರೂ ಸೋಂಕಿತರ ಸಂಕಷ್ಟ ಪರಿಹಾರವಾಗುತ್ತಾ ಕಾದು ನೋಡ್ಬೇಕಿದೆ.

Published On - 7:17 am, Wed, 8 July 20