ಮಣಿಪುರ ಜನರ ನೆರವಿಗೆ ದೇಣಿಗೆ ಕೇಳಿ ನನ್ನ ಹೆಸರಲ್ಲಿ ಈಮೇಲ್ ಬಂದರೆ ಅದು ಫೇಕ್, ಮೋಸ ಹೋಗಬೇಡಿ: ಸುರೇಶ್ ಹೆಬ್ಳೀಕರ್, ಪರಿಸರವಾದಿ
ಬೆಲ್ಜಿಯಂನಲ್ಲಿರುವ ಸುರೇಶ್ ಅವರ ಪರಿಸರವಾದಿ ಸ್ನೇಹಿತೆ ನತಾಶಾ, ಐಪಿಎಸ್ ಅಧಿಕಾರಿಯಾಗಿರುವ ಅವರ ಸಹೋದರ ಪ್ರಸಾದ್ ಹೆಬ್ಳೀಕರ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ಬೇರೆ ಕೆಲ ಜನರಿಗೆ ಈಮೇಲ್ ಗಳು ಹೋಗಿವೆ. ಅವರೆಲ್ಲ ಸುರೇಶ್ ಗೆ ಪೋನಾಯಿಸಿ ವಿಷಯ ತಿಳಿಸಿದಾಗ ಅವರು ಗಾಬರಿಯಾಗಿದ್ದಾರೆ. ಕೂಡಲೇ ಇಕೋ ವಾಚ್ ವೆಬ್ ಸೈಟ್ ನ ಪಾಸ್ ವರ್ಡ್ ಬದಲಾಯಿಸುವಂತೆ ಪ್ರಸಾದ್ ತಿಳಿಸಿದ್ದಾರಂತೆ
ಧಾರವಾಡ: ಪರಿಸರವಾದಿ, ಚಿತ್ರನಟ ಸುರೇಶ್ ಹೆಬ್ಳೀಕರ್ (Suresh Heblikar) ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಅವರ ಇಕೋ ವಾಚ್ (Eco Watch) ಸಂಸ್ಥೆಯಿಂದ ದೇಣಿಗೆ ಕೇಳಿ ಈಮೇಲ್ ಬಂದರೆ ಅದನ್ನು ನಿರ್ಲಕ್ಷಿಸಿ ಅಂತ ಸಾರ್ವಜನಿಕರಿಗೆ ಮನವಿ ಮಾಡಿದರು. ಸುರೇಶ್ ಹೇಳುವ ಪ್ರಕಾರ ಅವರ ಇಕೋ ವಾಚ್ ಸಂಸ್ಥೆಯ ವೆಬ್ ಸೈಟ್ ಪಾಸ್ ವರ್ಡ್ ಅನ್ನು (password) ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡಿ, ಹೆಚ್ಚಾಗಿ ಅವರ ಸಂಪರ್ಕದಲ್ಲಿರುವ ಜನರಿಗೆ ಮೇಲ್ ಕಳಿಸಿ ಮಣಿಪುರದಲ್ಲಿ ಹಿಂಸೆಗೆ ತುತ್ತಾಗಿರುವ ಜನಕ್ಕೆ ಹಣ ಸಂಗ್ರಹಿಸುತ್ತಿದ್ದು ನಿಮ್ಮ ಕಾಂಟ್ರಿಬ್ಯೂಷನ್ ಕಳಿಸಿ ಅಂತ ಮನವಿ ಮಾಡುತ್ತಿದ್ದಾರಂತೆ. ಬೆಲ್ಜಿಯಂನಲ್ಲಿರುವ ಸುರೇಶ್ ಅವರ ಪರಿಸರವಾದಿ ಸ್ನೇಹಿತೆ ನತಾಶಾ, ಐಪಿಎಸ್ ಅಧಿಕಾರಿಯಾಗಿರುವ ಅವರ ಸಹೋದರ ಪ್ರಸಾದ್ ಹೆಬ್ಳೀಕರ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ಬೇರೆ ಕೆಲ ಜನರಿಗೆ ಈಮೇಲ್ ಗಳು ಹೋಗಿವೆ. ಅವರೆಲ್ಲ ಸುರೇಶ್ ಗೆ ಪೋನಾಯಿಸಿ ವಿಷಯ ತಿಳಿಸಿದಾಗ ಅವರು ಗಾಬರಿಯಾಗಿದ್ದಾರೆ. ಕೂಡಲೇ ಇಕೋ ವಾಚ್ ವೆಬ್ ಸೈಟ್ ನ ಪಾಸ್ ವರ್ಡ್ ಬದಲಾಯಿಸುವಂತೆ ಪ್ರಸಾದ್ ತಿಳಿಸಿದ್ದಾರಂತೆ. ಹ್ಯಾಕರ್ಸ್ ಬೇರೆಯವರಿಗೂ ಮೇಲ್ ಕಳಿಸಿ ಹಣ ಪೀಕುವ ಸಾಧ್ಯತೆ ಇರೋದ್ರಿಂದ ಜನ ವಂಚನೆಗೊಳಗಾಗದಿರಲು ಸುದ್ದಿಗೋಷ್ಟಿ ಕರೆದು ಸಾರ್ವಜನಿಕರನ್ನು ಎಚ್ಚರಿಸುತ್ತಿರುವುದಾಗಿ ಸುರೇಶ್ ಹೆಬ್ಳೀಕರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ