ಮತ್ತೊಮ್ಮೆ ಮುನ್ನೆಲೆಗೆ ಬಂದ ಕುಮಾರಸ್ವಾಮಿ ಪೆನ್ ಡ್ರೈವ್, ಜಪ್ತು ಮಾಡಿ ಕ್ರಮ ಜರುಗಿಸುವಂತೆ ಪೊಲೀಸ್ ಠಾಣೆಯಲ್ಲಿ ದೂರು
ಪಬ್ಲಿಕ್ ಸರ್ವೆಂಟ್ ಆಗಿರುವ ವ್ಯಕ್ತಿಯೊಬ್ಬ ಆರೋಪದ ಸಾಕ್ಷ್ಯಗಳನ್ನು ಬಹಿರಂಗಪಡಿಸದೆ ತನ್ನಲ್ಲೇ ಇಟ್ಟುಕೊಳ್ಳೋದು ಅಪರಾಧನವೆನಿಸುತ್ತದೆ. ಅದನ್ನು ಬಹಿರಂಗ ಮಾಡಿ ಇಲ್ಲವೇ ಲೋಕಾಯುಕ್ತಗೆ ಒಪ್ಪಿಸಿ ಅಂತ ಕುಮಾರಸ್ವಾಮಿಗೆ 2 ತಿಂಗಳ ಹಿಂದೆ ಲೀಗಲ್ ನೋಟೀಸ್ ನೀಡಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ, ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಪೆನ್ ಡ್ರೈವ್ ಜಪ್ತು ಮಾಡುವಂತೆ ಮತ್ತು ಅಗತ್ಯ ಕ್ರಮ ಜರುಗಿಸುವಂತೆ ಮನವಿ ಮಾಡಲಾಗಿದೆ ಎಂದು ಅಮೃತೇಶ್ ಹೇಳಿದರು.
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ವಿಧಾನ ಸೌಧದ ಪೊಲೀಸ್ ಠಾಣೆಯಲ್ಲಿ ಅವರು ವಿಧಾನ ಸೌಧ ಅಧಿವೇಶನದಲ್ಲಿ ಪ್ರದರ್ಶಿಸಿದ ಪೆನ್ ಡ್ರೈವ್ (pendrive) ಸಂಬಂಧಿಸಿದಂತೆ ಅಮೃತೇಶ್ ಹೆಸರಿನ ವಕೀಲ (lawyer Amrutesh) ದೂರೊಂದನ್ನು ಸಲ್ಲಿಸಿ ಮಾಜಿ ಮುಖ್ಯಮಂತ್ರಿ ಮೇಲೆ ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ. ದೂರು ಸಲ್ಲಿಸಿದ ಬಳಿಕ ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಅಮೃತೇಶ್, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಮತ್ತು ಈಗ ಚನ್ನಪಟ್ಟಣದ ಶಾಸಕರಾಗಿದ್ದಾರೆ, ಅಂದರೆ ಅವರೊಬ್ಬ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿ. ಅವರು ಕಾಂಗ್ರೆಸ್ ಸರ್ಕಾರ ಮತ್ತು ಅದರ ಕೆಲ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದು ಅದಕ್ಕೆ ಸಾಕ್ಷಿ, ಪುರಾವೆ ಪೆನ್ ಡ್ರೈವ್ ನಲ್ಲಿವೆ ಅಂತ ಅದನ್ನು ಆದಿವೇಶನ ಮತ್ತು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದಾರೆ, ಅಂತ ಹೇಳಿದ ವಕೀಲ, ಪಬ್ಲಿಕ್ ಸರ್ವೆಂಟ್ ಆಗಿರುವ ವ್ಯಕ್ತಿಯೊಬ್ಬ ಆರೋಪದ ಸಾಕ್ಷ್ಯಗಳನ್ನು ಬಹಿರಂಗಪಡಿಸದೆ ತನ್ನಲ್ಲೇ ಇಟ್ಟುಕೊಳ್ಳೋದು ಅಪರಾಧನವೆನಿಸುತ್ತದೆ. ಅದನ್ನು ಬಹಿರಂಗ ಮಾಡಿ ಇಲ್ಲವೇ ಲೋಕಾಯುಕ್ತಗೆ ಒಪ್ಪಿಸಿ ಅಂತ ಕುಮಾರಸ್ವಾಮಿಗೆ 2 ತಿಂಗಳ ಹಿಂದೆ ಲೀಗಲ್ ನೋಟೀಸ್ ನೀಡಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ, ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಪೆನ್ ಡ್ರೈವ್ ಜಪ್ತು ಮಾಡುವಂತೆ ಮತ್ತು ಅಗತ್ಯ ಕ್ರಮ ಜರುಗಿಸುವಂತೆ ಮನವಿ ಮಾಡಲಾಗಿದೆ ಎಂದು ಅಮೃತೇಶ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ