AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPF Update: ಇಪಿಎಫ್ ಖಾತೆಯನ್ನು ಎಷ್ಟು ಬಾರಿ ಅಪ್​ಡೇಟ್ ಮಾಡಬಹುದು ಗೊತ್ತಾ?

EPF Update: ಇಪಿಎಫ್ ಖಾತೆಯನ್ನು ಎಷ್ಟು ಬಾರಿ ಅಪ್​ಡೇಟ್ ಮಾಡಬಹುದು ಗೊತ್ತಾ?

ಕಿರಣ್​ ಐಜಿ
|

Updated on: Apr 18, 2024 | 7:05 AM

ಪಿಎಫ್ ಖಾತೆಯ ಬಗ್ಗೆ ಮತ್ತು ಅದರ ನಿರ್ವಹಣೆ ಕುರಿತು ಜನರಿಗೆ ಬಹಳಷ್ಟು ಸಂಶಯಗಳಿರುತ್ತವೆ. ಇಪಿಎಫ್ ಖಾತೆಯ ನಿರ್ವಹಣೆ ಮತ್ತು ಅದರ ಪ್ರಯೋಜನ ಕುರಿತು ಸಾಕಷ್ಟು ಜನರಿಗೆ ಸೂಕ್ತ ಮಾಹಿತಿ ಇಲ್ಲದಿರುವುದೂ ಇದಕ್ಕೆ ಕಾರಣ. ಇಪಿಎಫ್ ಖಾತೆಯ ಪ್ರೊಫೈಲ್​ನಲ್ಲಿ ಸದಸ್ಯರ ಹೆಸರು, ಜನ್ಮದಿನಾಂಕ ಸೇರಿದಂತೆ 11 ಅಂಶಗಳನ್ನು ಅಗತ್ಯಬಿದ್ದರೆ ಬದಲಾಯಿಸಬಹುದು.

ಪಿಎಫ್ ಖಾತೆಯ ಬಗ್ಗೆ ಮತ್ತು ಅದರ ನಿರ್ವಹಣೆ ಕುರಿತು ಜನರಿಗೆ ಬಹಳಷ್ಟು ಸಂಶಯಗಳಿರುತ್ತವೆ. ಇಪಿಎಫ್ ಖಾತೆಯ ನಿರ್ವಹಣೆ ಮತ್ತು ಅದರ ಪ್ರಯೋಜನ ಕುರಿತು ಸಾಕಷ್ಟು ಜನರಿಗೆ ಸೂಕ್ತ ಮಾಹಿತಿ ಇಲ್ಲದಿರುವುದೂ ಇದಕ್ಕೆ ಕಾರಣ. ಇಪಿಎಫ್ ಖಾತೆಯ ಪ್ರೊಫೈಲ್​ನಲ್ಲಿ ಸದಸ್ಯರ ಹೆಸರು, ಜನ್ಮದಿನಾಂಕ ಸೇರಿದಂತೆ 11 ಅಂಶಗಳನ್ನು ಅಗತ್ಯಬಿದ್ದರೆ ಬದಲಾಯಿಸಬಹುದು. ಆದರೆ, ವೈವಾಹಿಕ ಸ್ಥಿತಿ ಹೊರತುಪಡಿಸಿ ಉಳಿದ 10 ಪ್ಯಾರಾಮೀಟರ್​ಗಳನ್ನು ಒಮ್ಮೆ ಮಾತ್ರವೇ ಬದಲಾವಣೆ ಮಾಡಲು ಸಾಧ್ಯ. ಹಾಗೆಯೇ, ಐದಕ್ಕಿಂತ ಹೆಚ್ಚು ಅಂಶಗಳಲ್ಲಿ ವಿವರ ಬದಲಾವಣೆಗೆ ಜಾಯಿಂಟ್ ಡಿಕ್ಲರೇಶನ್​ಗಳನ್ನು ಸಲ್ಲಿಸಲಾಗಿದ್ದರೆ ಅಧಿಕಾರಿಗಳು ಎಚ್ಚರ ವಹಿಸಿ, ಸೂಕ್ತವಾಗಿ ಪರಿಶೀಲನೆ ಮಾಡುತ್ತಾರೆ. ಇಪಿಎಫ್​ಒ ಮಾರ್ಚ್ 11ರಂದು ಹೊಸ ಎಸ್​ಒಪಿ ಅಥವಾ ಕ್ರಮಾವಳಿ ಬಿಡುಗಡೆ ಮಾಡಿದೆ. ನಿಮ್ಮ ಇಪಿಎಫ್ ಖಾತೆಯನ್ನು ಎಷ್ಟು ಬಾರಿ ಮಾರ್ಪಡಿಸಬಹುದು? ಯಾವ್ಯಾವ ವಿವರ ಎಷ್ಟೆಷ್ಟು ಸಲ ಬದಲಿಸಲು ಸಾಧ್ಯ? ಎಂಬ ಕುರಿತು ಮಾಹಿತಿ ಈ ವಿಡಿಯೊದಲ್ಲಿದೆ.