Video: ಡೊನಾಲ್ಡ್​ ಟ್ರಂಪ್, ಮೆಲಾನಿಯಾ ಹತ್ತುತ್ತಿದ್ದಂತೆ ಏಕಾಏಕಿ ನಿಂತ ವಿಶ್ವಸಂಸ್ಥೆಯ ಎಸ್ಕಲೇಟರ್

Updated By: Digi Tech Desk

Updated on: Sep 24, 2025 | 12:35 PM

ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹಾಗೂ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಎಸ್ಕಲೇಟರ್ ಹತ್ತುತ್ತಿರುವಾಗ ಅದು ಏಕಾಏಕಿ ನಿಂತಿರುವ ಘಟನೆ ನಡೆದಿದೆ. ಶ್ವೇತಭವನವು ತನಿಖೆಗೆ ಆಗ್ರಹಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇಬ್ಬರು ಎಸ್ಕಲೇಟರ್ ಹತ್ತಿದ ಮರುಕ್ಷಣದಲ್ಲೇ ಅದು ನಿಂತಿತ್ತು. ಟ್ರಂಪ್ ಮತ್ತು ಮೆಲಾನಿಯಾ ಗಾಬರಿಗೊಂಡಿದ್ದರು. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತನಿಖೆಗೆ ಒತ್ತಾಯಿಸಿದರು ಮತ್ತು ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದರೆ, ಇದರ ಹಿಂದಿರುವವರನ್ನು ವಜಾಗೊಳಿಸಬೇಕು ಎಂದು ಹೇಳಿದ್ದಾರೆ.

ನ್ಯೂಯಾರ್ಕ್​, ಸೆಪ್ಟೆಂಬರ್ 24: ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹಾಗೂ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಎಸ್ಕಲೇಟರ್ ಹತ್ತುತ್ತಿರುವಾಗ ಅದು ಏಕಾಏಕಿ ನಿಂತಿರುವ ಘಟನೆ ನಡೆದಿದೆ. ಶ್ವೇತಭವನವು ತನಿಖೆಗೆ ಆಗ್ರಹಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇಬ್ಬರು ಎಸ್ಕಲೇಟರ್ ಹತ್ತಿದ ಮರುಕ್ಷಣದಲ್ಲೇ ಅದು ನಿಂತಿತ್ತು. ಟ್ರಂಪ್ ಮತ್ತು ಮೆಲಾನಿಯಾ ಗಾಬರಿಗೊಂಡಿದ್ದರು. ಬಳಿಕ ಮೆಟ್ಟಿಲುಗಳ ಮೇಲೆಯೇ ನಡೆದು ಹೋಗುವಂತಾಯಿತು.  ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತನಿಖೆಗೆ ಒತ್ತಾಯಿಸಿದ್ದಾರೆ ಮತ್ತು ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದರೆ, ಇದರ ಹಿಂದಿರುವವರನ್ನು ವಜಾಗೊಳಿಸಬೇಕು ಎಂದು ಹೇಳಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 24, 2025 12:26 PM