Loading video

Bengaluru Traffic: ಟ್ರಾಫಿಕ್​ನಲ್ಲಿ ಸಿಲುಕಿ ನನಗೂ ಫ್ಲೈಟ್ ಮಿಸ್ಸಾಗಿದ್ದಿದೆ ಎಂದ ಡಿಕೆ ಶಿವಕುಮಾರ್

|

Updated on: Jun 21, 2023 | 3:20 PM

ದೆಹಲಿಯಲ್ಲಿ ಬೆಂಗಳೂರಿಗಿಂತ ಕೆಟ್ಟ ಟ್ರಾಫಿಕ್ ಇದೆ. ನನಗೂ ಕೂಡ ಬಹಳ ಸತಿ ಟ್ರಾಫಿಕ್​ನಲ್ಲಿ ಸಿಲುಕಿ ಫ್ಲೈಟ್ ಮಿಸ್ಸಾಗಿದ್ದು ಇದೆ ಎಂದು ಸುದ್ದಿಗೋಷ್ಠಿ ವೇಳೆ ಡಿಕೆ ಶಿವಕುಮಾರ್ ಟ್ರಾಫಿಕ್ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ರು.

ಬೆಂಗಳೂರು: ವಿಕಾಸಸೌಧದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಬೆಂಗಳೂರು ಸಂಬಂಧ ಚರ್ಚೆಗೆ ಹಿಂದಿನ ಸಿಎಂಗೆ ಸಮಯ ಕೇಳಿದ್ದೆ. ಆಗ ಬೊಮ್ಮಾಯಿ ಸಮಯ ನೀಡಿರಲಿಲ್ಲ, ಈಗ ಆರೋಪ ಮಾಡ್ತಿದ್ದಾರೆ. ಬಿಜೆಪಿಯವರು ಬಹಳ ಕೂಗಾಡ್ತಿದ್ದಾರಾ ಕೂಗಾಡಲಿ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಿಚ್ಚುಡುತ್ತೇನೆ ಎಂದರು. ಹಾಗೂ ಇದೇ ವೇಳೆ ಟ್ರಾಫಿಕ್ ಸಂಬಂಧ ಮಾತನಾಡಿದ್ರು. ದೆಹಲಿಯಲ್ಲಿ ಬೆಂಗಳೂರಿಗಿಂತ ಕೆಟ್ಟ ಟ್ರಾಫಿಕ್ ಇದೆ. ನನಗೂ ಕೂಡ ಬಹಳ ಸತಿ ಟ್ರಾಫಿಕ್​ನಲ್ಲಿ ಸಿಲುಕಿ ಫ್ಲೈಟ್ ಮಿಸ್ಸಾಗಿದ್ದು ಇದೆ ಎಂದರು.

Published on: Jun 21, 2023 03:15 PM