AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಏನಾಗಲಿದೆ ವಿನಯ್ ಕುಲಕರ್ಣಿ ಭವಿಷ್ಯ: ಸಿಬಿಐ ಕಸ್ಟಡಿನಾ.. ನ್ಯಾಯಾಂಗ ಬಂಧನನಾ..?

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ಕಸ್ಟಡಿ ಇಂದಿಗೆ ಕೊನೆಗೊಳ್ಳಲಿದೆ. ಮೂರು ದಿನಗಳ ಸಿಬಿಐ ಕಸ್ಟಡಿ ಬಳಿಕ ಇಂದು ವಿನಯ ಕುಲಕರ್ಣಿ ಅವರನ್ನು ಸಿಬಿಐ ಕೋರ್ಟ್​ಗೆ ಹಾಜರು ಪಡಿಸಲಿದೆ. ಮತ್ತಷ್ಟು ದಿನ ವಿನಯ್ ಅವರನ್ನು ಸಿಬಿಐ ಕಸ್ಟಡಿಗೆ ಕೇಳಲಿದೆಯಾ ಅಥವಾ ನ್ಯಾಯಾಂಗ ಬಂಧನಕ್ಕೆ ವಿನಯ್ ಹೋಗಲಿದ್ದಾರಾ ಅನ್ನೋ ಕುತೂಹಲ ಇದೀಗ ಗರಿಗೆದರಿದೆ. ಬರೋಬ್ಬರಿ ಎರಡು ದಿನ.. ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸಿಬಿಐ ಪ್ರಶ್ನೆಗಳ ಸುರಿಮಳೆಗೈಯ್ಯುತ್ತಿದೆ. ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್​ಗೌಡ ಹತ್ಯೆ ರೋಚಕ ರಹಸ್ಯವನ್ನ […]

ಇಂದು ಏನಾಗಲಿದೆ ವಿನಯ್ ಕುಲಕರ್ಣಿ ಭವಿಷ್ಯ: ಸಿಬಿಐ ಕಸ್ಟಡಿನಾ.. ನ್ಯಾಯಾಂಗ ಬಂಧನನಾ..?
ಮಾಜಿ ಸಚಿವ ವಿನಯ್​ ಕುಲಕರ್ಣಿ
ಆಯೇಷಾ ಬಾನು
|

Updated on:Nov 09, 2020 | 7:52 AM

Share

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ಕಸ್ಟಡಿ ಇಂದಿಗೆ ಕೊನೆಗೊಳ್ಳಲಿದೆ. ಮೂರು ದಿನಗಳ ಸಿಬಿಐ ಕಸ್ಟಡಿ ಬಳಿಕ ಇಂದು ವಿನಯ ಕುಲಕರ್ಣಿ ಅವರನ್ನು ಸಿಬಿಐ ಕೋರ್ಟ್​ಗೆ ಹಾಜರು ಪಡಿಸಲಿದೆ. ಮತ್ತಷ್ಟು ದಿನ ವಿನಯ್ ಅವರನ್ನು ಸಿಬಿಐ ಕಸ್ಟಡಿಗೆ ಕೇಳಲಿದೆಯಾ ಅಥವಾ ನ್ಯಾಯಾಂಗ ಬಂಧನಕ್ಕೆ ವಿನಯ್ ಹೋಗಲಿದ್ದಾರಾ ಅನ್ನೋ ಕುತೂಹಲ ಇದೀಗ ಗರಿಗೆದರಿದೆ.

ಬರೋಬ್ಬರಿ ಎರಡು ದಿನ.. ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸಿಬಿಐ ಪ್ರಶ್ನೆಗಳ ಸುರಿಮಳೆಗೈಯ್ಯುತ್ತಿದೆ. ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್​ಗೌಡ ಹತ್ಯೆ ರೋಚಕ ರಹಸ್ಯವನ್ನ ಕೆದಕಿ ಕೆದಕಿ ತೆಗೆಯುತ್ತಿದೆ. ಸಿಬಿಐ ನಡೆಸುತ್ತಿರೋ ನಿರಂತರ ವಿಚಾರಣೆಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಪತರುಗುಟ್ಟಿ ಹೋಗಿದ್ದಾರೆ.

ಮತ್ತೆ ಸಿಬಿಐ ಕಸ್ಟಡಿನಾ..? ನ್ಯಾಯಾಂಗ ಬಂಧನನಾ..? ಕೋರ್ಟ್ ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದ್ದರೂ, ತಾಂತ್ರಿಕ ಕಾರಣಗಳಿಂದ ಎರಡು ದಿನಗಳ ಕಾಲವಷ್ಟೇ ಅವರನ್ನ ವಿಚಾರಣೆಗೆ ಒಳಪಡಿಸಲು ಸಿಬಿಐಗೆ ಸಾಧ್ಯವಾಗಿದೆ. ಹೀಗಾಗಿ ಮತ್ತೆ ಕೆಲವು ದಿನಗಳಿಗೆ ಸಿಬಿಐ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಕೋರ್ಟ್ ಗೆ ಮನವಿ ಸಲ್ಲಿಸಲು ನಿರ್ಧರಿಸಿದೆ ಎನ್ನಲಾಗಿದೆ. ಈ ಮಧ್ಯೆ ಹಲವಾರು ಹೊರ ವಿಚಾರಗಳ ಬಗ್ಗೆ ಮಾಹಿತಿ ಪಡೆದಿರೋ ಸಿಬಿಐ ಮತ್ತಷ್ಟು ಜನರ ವಿಚಾರಣೆ ನಡೆಸಲು ನಿರ್ಧರಿಸಿದೆ ಎನ್ನಲಾಗಿದೆ. ವಿಚಾರಣೆ ವೇಳೆ ವಿನಯ್ ಸಹಕಾರ ನೀಡಿದರೂ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ಸಿಗದೇ ಇರೋ ಹಿನ್ನೆಲೆಯಲ್ಲಿ ಮತ್ತಷ್ಟು ದಿನಗಳ ಕಸ್ಟಡಿ ಅವಶ್ಯಕ ಎನ್ನಲಾಗಿದೆ. ಆದರೆ ಈ ಬಗ್ಗೆ ನ್ಯಾಯಾಲಯದ ತೀರ್ಮಾನವೇ ಅಂತಿಮವಾಗಲಿದೆ.

ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ ವಿನಯ್ ಪರ ವಕೀಲ: ಈ ಮಧ್ಯೆ ವಿನಯ್ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಈ ಪ್ರಕರಣದಲ್ಲಿ ವಿನಾಕಾರಣ ವಿನಯ್ ಹೆಸರನ್ನು ತಳಕು ಹಾಕಲಾಗಿದೆ. ಇದುವರೆಗೂ ದಾಖಲಾದ ಎಫ್.ಐ.ಆರ್. ಹಾಗೂ ಸಲ್ಲಿಸಲಾದ ಚಾರ್ಜ್ ಶೀಟ್​ನಲ್ಲಿ ಎಲ್ಲಿಯೂ ವಿನಯ್ ಕುಲಕರ್ಣಿ ಅವರ ಹೆಸರನ್ನು ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಅವರನ್ನು ಸೇರ್ಪಡೆ ಮಾಡೋ ಅವಶ್ಯಕತೆ ಏನಿದೆ ಅಂತಾ ವಿನಯ್ ಕುಲಕರ್ಣಿ ಪರ ವಾದ ಮಂಡಿಸಲಿದ್ದಾರೆ.

ಕೋರ್ಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್: ಸಿಬಿಐ ಕಸ್ಟಡಿ ಅಂತ್ಯವಾಗ್ತಿರೋ ಹಿನ್ನೆಲೆಯಲ್ಲಿ ಇಂದು ಕೋರ್ಟ್‌ಗೆ ವಿನಯ ಕುಲಕರ್ಣಿ ಅವರನ್ನು ಸಿಬಿಐ ಕರೆತರಲಿದೆ. ಹಾಗಾಗಿ ಧಾರವಾಡ ನಗರದಾದ್ಯಂತ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅದರಲ್ಲೂ ಜಿಲ್ಲಾ ನ್ಯಾಯಾಲಯಕ್ಕಂತೂ ಭಾರೀ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಇಂದು ನಡೆಯಲಿರೋ ಕೋರ್ಟ್ ಕಲಾಪದಲ್ಲಿ ವಿನಯ್ ಬೆಳಗಾವಿಯ ಹಿಂಡಲಗಾ ಜೈಲು ಸೇರುತ್ತಾರೋ ಅಥವಾ ಸಿಬಿಐ ಕಸ್ಟಡಿ ಸೇರುತ್ತಾರೋ ಅನ್ನೋದನ್ನು ಕಾದು ನೋಡಬೇಕಿದೆ.

Published On - 6:41 am, Mon, 9 November 20