22 ಲಕ್ಷ ರೂ. ಮೌಲ್ಯದ ಲೋಡ್​ಗಟ್ಟಲೆ ಬಿಯರ್, ವೈನ್ ಚರಂಡಿ ಪಾಲು! ಯಾಕೆ ಗೊತ್ತೇ?

Edited By:

Updated on: Jan 09, 2026 | 10:06 AM

ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅವಧಿ ಮೀರಿದ ಮದ್ಯ ಮಾರಾಟವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಚಾಮರಾಜನಗರದಲ್ಲಿ 22 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಬಿಯರ್ ಮತ್ತು ವೈನ್ ಅನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಮುಂದಿನ ದಿನಗಳಲ್ಲೂ ಇಂತಹ ಪರಿಶೀಲನೆ ಮತ್ತು ದಾಳಿಗಳು ಮುಂದುವರಿಯಲಿವೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಚಾಮರಾಜನಗರ, ಜನವರಿ 9: ಚಾಮರಾಜನಗರದಲ್ಲಿ ಅವಧಿ ಮೀರಿದ ಮದ್ಯವನ್ನು ಅಬಕಾರಿ ಇಲಾಖೆ ನಾಶಪಡಿಸಿದೆ. ಚಾಮರಾಜನಗರದ ಕೈಗಾರಿಕಾ ಪ್ರದೇಶದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭಾರಿ ಪ್ರಮಾಣದಲ್ಲಿ ಅವಧಿ ಮೀರಿದ ಬಿಯರ್ ಮತ್ತು ವೈನ್ ಅನ್ನು ನಾಶಪಡಿಸಿದ್ದಾರೆ. ಬಿಯರ್ ಬೆಲೆ ದಿಢೀರ್ ಹೆಚ್ಚಳವಾದ ಹಿನ್ನೆಲೆ ಮದ್ಯ ಮಾರಾಟದಲ್ಲಿ ಗಣನೀಯ ಕುಂಠಿತ ಉಂಟಾಗಿದ್ದು, ಬಾರ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಎಂಆರ್‌ಪಿ ವೈನ್ ಸ್ಟೋರ್‌ಗಳತ್ತ ಜನರು ಸುಳಿಯದ ಸ್ಥಿತಿ ನಿರ್ಮಾಣವಾಗಿತ್ತು. ಇದರ ಪರಿಣಾಮವಾಗಿ ಲೋಡ್​ಗಟ್ಟಲೆ ಬಿಯರ್ ಮತ್ತು ವೈನ್ ಮಾರಾಟವಾಗದೆ ಉಳಿದು, ಅವುಗಳ ಅವಧಿ ಮೀರಿತ್ತು.

ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಿದ್ದು, ಡಿಸಿ ಚಂದ್ರ ಅವರ ನೇತೃತ್ವದ ತಂಡ ಕೈಗಾರಿಕಾ ಪ್ರದೇಶದಲ್ಲಿ ದಾಳಿ ನಡೆಸಿ, ಸುಮಾರು 22 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಬಿಯರ್ ಮತ್ತು ವೈನ್ ಅನ್ನು ಸಂಪೂರ್ಣವಾಗಿ ನಾಶಪಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ