ದಾವಣಗೆರೆ: ಕಾಡು ಪ್ರಾಣಿಗಳ ಬೇಟೆಗೆ ಬಳಸುತ್ತಿದ್ದ ಸ್ಫೋಟಕ ಪತ್ತೆ

| Updated By: ವಿವೇಕ ಬಿರಾದಾರ

Updated on: Aug 19, 2023 | 8:13 AM

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ರಂಗಯ್ಯದುರ್ಗ ಅರಣ್ಯ ಪ್ರದೇಶದ ಸುತ್ತಮುತ್ತ 15 ಕಡೆ ಕಾಡುಪ್ರಾಣಿಗಳ ಬೇಟೆಗೆ ಬಳಸುತ್ತಿದ್ದ ಸ್ಫೋಟಕ ಪತ್ತೆಯಾಗಿದೆ. ವಿಚಾರ ತಿಳಿದು ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಯಿಂದ ಅರಣ್ಯ ಇಲಾಖೆಯ ಪರಿಣಿತರ ತಂಡ ಆಗಮಿಸಿ ಸ್ಫೋಟಕ ವಶಪಡಿಸಿಕೊಂಡಿದೆ.

ದಾವಣಗೆರೆ (ಆ.19): ಜಿಲ್ಲೆಯ ಜಗಳೂರು (Jagaluru) ತಾಲೂಕಿನ ರಂಗಯ್ಯದುರ್ಗ ಅರಣ್ಯ (Forest) ಪ್ರದೇಶದ ಸುತ್ತಮುತ್ತ 15 ಕಡೆ ಕಾಡುಪ್ರಾಣಿಗಳ (Forest Animal) ಬೇಟೆಗೆ ಬಳಸುತ್ತಿದ್ದ ಸ್ಫೋಟಕ ಪತ್ತೆಯಾಗಿದೆ. ವಿಚಾರ ತಿಳಿದು ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಯಿಂದ ಅರಣ್ಯ ಇಲಾಖೆಯ ಪರಿಣಿತರ ತಂಡ ಆಗಮಿಸಿ ಸ್ಫೋಟಕ ವಶಪಡಿಸಿಕೊಂಡಿದೆ. ಅಲ್ಲದೇ ಕೆಲ ರೈತರ ಜಮೀನು ಗಳಲ್ಲಿ ಸಹ ಇಂತಹ ಸ್ಪೋಟಕಗಳು ಪತ್ತೆಯಾಗಿವೆ. ದುಷ್ಕರ್ಮಿಗಳು ಸ್ಫೋಟಕ ಇಟ್ಟು ಕಾಡು ಪ್ರಾಣಿಗಳನ್ನು ಬೇಟೆ ಆಡುತ್ತಿದ್ದರು. ಸದ್ಯ ಅಧಿಕಾರಿಗಳು ಮೀನಗಾರನಹಳ್ಳಿ ಗ್ರಾಮದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Follow us on