ಶಿವ ಸೇನೆಯ ಕೆಲ ಭಿಕ್ಷುಕರ ಕೈ ಹಿಡಿದು ಬಿಜೆಪಿ ತಾನೊಂದು ಮಹಾಶಕ್ತಿಯೆಂದು ಬಿಂಬಿಸಿಕೊಳ್ಳುತ್ತಿದೆ: ಸಾಮ್ನಾದಲ್ಲಿ ಸಂಪಾದಕೀಯ!
ಬಿಜೆಪಿ ನಾಯಕರು ಒಂದಷ್ಟು ಭಿಕ್ಷುಕರ (ಬಂಡಾಯ ಶಿವಸೇನಾ ನಾಯಕರು) ಕೈ ಹಿಡಿದುಕೊಂಡು ಮಹಾಶಕ್ತಿಯಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿದ್ದಾರೆ ಅಂತ ತೀಕ್ಷ್ಣವಾದ ಪದಗಳಲ್ಲಿ ಟೀಕಿಸಲಾಗಿದೆ.
ಎರಡು ದಿನಗಳ ಕಾಲ ಬಂಡಾಯ ಶಿವ ಸೇನಾ ಸಚಿವ ಏಕಾನಾಥ್ ಶಿಂಧೆ ಅವರನ್ನು ಓಲೈಸುವ ಧ್ವನಿಯಲ್ಲಿ ಮಾತಾಡಿದ ಉದ್ಧವ್ ಠಾಕ್ರೆ (Uddhav Thackeray), ಸಂಜಯ ರಾವತ್ (Sanjay Raut) ಮೊದಲಾದ ಶಿವಸೇನಾ ನಾಯಕರು (Shiv Sena) ಈಗ ಬಂಡಾಯವೆದ್ದಿರುವ ಶಿವ ಸೇನಾ ನಾಯಕರು ಮತ್ತು ಅವರನ್ನು ಬೆಂಬಲಕ್ಕೆ ನಿಂತಿದ್ದಾರೆಂದು ಅರೋಪಿಸಲಾಗುತ್ತಿರುವ ಬಿಜೆಪಿಯ ಪ್ರಮುಖ ನಾಯಕರ ವಿರುದ್ಧ ಯುದ್ಧ ಸಾರಿದ್ದಾರೆ. ಶಿವ ಸೇನಾದ ಮುಖವಾಣಿ ಸಾಮ್ನಾ (Saamana) ಪತ್ರಿಕೆಯ ಶನಿವಾರದ ಸಂಪದಕೀಯದಲ್ಲಿದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯೋಗಕ್ಕೆ ಬಹಳ ಹೆಸರುವಾಸಿ, ಅದಕ್ಕೆ ಜಾಗತಿಕವಾಗಿ ಮಾನ್ಯತೆ ಕೊಡಿಸಿದ್ದಾರೆ. ಅದರೆ ಗುವಾಹಾಟಿಯಲ್ಲಿ ಶಿಬಿರ ಹೂಡಿರುವ ಶಿವ ಸೇನಾ ನಾಯಕರ ಬಗ್ಗೆ ಅವರ ಧ್ಯಾನ ಚಿಂತನೆ ಬೇರೆಯೇ ಆಗಿದೆ. ಬಿಜೆಪಿ ನಾಯಕರು ಒಂದಷ್ಟು ಭಿಕ್ಷುಕರ (ಬಂಡಾಯ ಶಿವಸೇನಾ ನಾಯಕರು) ಕೈ ಹಿಡಿದುಕೊಂಡು ಮಹಾಶಕ್ತಿಯಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿದ್ದಾರೆ ಅಂತ ತೀಕ್ಷ್ಣವಾದ ಪದಗಳಲ್ಲಿ ಟೀಕಿಸಲಾಗಿದೆ.
ಇದನ್ನೂ ಓದಿ: ನಗ್ನ ಯುವತಿಯಿಂದ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡು, ಹಣಕ್ಕಾಗಿ ಬ್ಲ್ಯಾಕ್ ಮೆಲ್: ಬಿಜೆಪಿ ಮುಖಂಡ ದೂರು