Facebook Blue Tick: ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂನಲ್ಲಿ ಬ್ಲೂಟಿಕ್ ಬೇಕಾದ್ರೆ ದುಡ್ಡು ಕೊಡ್ಬೇಕು!

Facebook Blue Tick: ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂನಲ್ಲಿ ಬ್ಲೂಟಿಕ್ ಬೇಕಾದ್ರೆ ದುಡ್ಡು ಕೊಡ್ಬೇಕು!

ಕಿರಣ್​ ಐಜಿ
|

Updated on: Jun 13, 2023 | 7:26 PM

ಟ್ವಿಟರ್​ ಅನ್ನೇ ಅನುಸರಿಸಿರುವ ಮೆಟಾ ಈಗ ಭಾರತದಲ್ಲಿ ಹಣ ಪಾವತಿ ಮಾಡಿದರೆ ಬ್ಲೂ ಟಿಕ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮೆಟಾ ಪ್ರಸ್ತುತ ಭಾರತಲ್ಲಿ ತನ್ನ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ಈ ಸೇವೆಗಳನ್ನು ಹೊರತಂದಿದೆ. ಐಇಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಈ ಆಯ್ಕೆ ಸಿಗುತ್ತಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.

ಮೆಟಾ ಒಡೆತನದ ಫೇಸ್​ಬುಕ್, ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಹೊಸ ಫೀಚರ್​ನ್ನು ಪರಿಚಯಿಸಲಾಗುತ್ತಿದೆ. ಇದರಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ಬ್ಲೂ ಟಿಕ್ ಚಂದಾದಾರಿಕೆ. ಟ್ವಿಟ್ಟರ್​ನಲ್ಲಿ ಹಣ ಕೊಟ್ಟು ವೆರಿಫೈಡ್ ಅನ್ನು ಪಡೆದುಕೊಳ್ಳಬಹುದು. ಇದೀಗ ಇದೇ ರೀತಿಯಲ್ಲಿ ಹಣ ಕೊಟ್ಟು ಬ್ಲೂ ಟಿಕ್ ಪಡೆದುಕೊಳ್ಳಿ ಎಂಬ ನಿಯಮವನ್ನು ಮೆಟಾ ಕಂಪನಿಯೂ ಪ್ರಾರಂಭಿಸಿದೆ. ಟ್ವಿಟರ್​ ಅನ್ನೇ ಅನುಸರಿಸಿರುವ ಮೆಟಾ ಈಗ ಭಾರತದಲ್ಲಿ ಹಣ ಪಾವತಿ ಮಾಡಿದರೆ ಬ್ಲೂ ಟಿಕ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮೆಟಾ ಪ್ರಸ್ತುತ ಭಾರತಲ್ಲಿ ತನ್ನ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ಈ ಸೇವೆಗಳನ್ನು ಹೊರತಂದಿದೆ. ಐಇಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಈ ಆಯ್ಕೆ ಸಿಗುತ್ತಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.