ಕೆಲವೇ ವಾರಗಳಲ್ಲಿ ಸುಮಾರು 19 ಬಿಲಿಯನ್ ಡಾಲರ್ ಕಳೆದುಕೊಂಡಿರುವ ಝಕರ್​ಬರ್ಗ್​ ಸಿರಿವಂತಿಕೆ ಕರಗುತ್ತಿದೆ!

| Updated By: sandhya thejappa

Updated on: Oct 06, 2021 | 9:20 AM

ಸೆಪ್ಟೆಂಬರ್ ಮತ್ತು ಸೋಮವಾರ ಕಂಡ ಕುಸಿತದ ಬಳಿಕ ಝಕರ್​​ಬರ್ಗ್​ ಅವರ ಸಂಪತ್ತು 121.6 ಮಿಲಿಯನ್ ಡಾಲರ್ ಆಗಿದೆ. ಅದರರ್ಥ ವಿಶ್ವದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ ಅವರು ಮೈಕ್ರೊಸಾಫ್ಟ್ ಬಿಲ್ ಗೇಟ್ಸ್​ಗಿಂತ ಒಂದು ಸ್ಥಾನ ಕೆಳಗಿಳಿದು 5ನೇ ಸ್ಥಾನಕ್ಕೆ ಜಾರಿದ್ದಾರೆ.

ಮಾರ್ಕ್ ಝಕರ್​ಬರ್ಗ್​​​ ಶ್ರೀಮಂತಿಕೆ ಇಳಿಮುಖಗೊಳ್ಳುತ್ತಿದೆಯೇ? ಬ್ಲೂಮ್​ಬರ್ಗ್​  ಬಿಲಿಯನ್ನೇರ್ಸ್ ಇಂಡೆಕ್ಸ್ ಪ್ರಕಾರ ಹೌದು, ಅವರ ಸಂಪತ್ತು ಕರಗುತ್ತಿದೆ. ಸೋಮವಾರಂದು ಫೇಸ್​ಬುಕ್ ಮತ್ತು ಅದರ ಎರಡು ಪ್ರಾಡಕ್ಟ್​​ಗಳ ಸೇವೆಯಲ್ಲಿ ಸುಮಾರು 6 ಗಂಟೆಗಳ ಕಾಲ ವ್ಯತ್ಯಯ ಉಂಟಾಗಿ ಸುಮಾರು ರೂ. 45,000-50,000 ಕೋಟಿಗಳನ್ನು ಝಕರ್​ಬರ್ಗ್​ ಕಳೆದುಕೊಂಡಿದ್ದು ನಿಜವಾದರೂ ಅವರು ಸಿರಿವಂತಿಕೆ ಕಮ್ಮಿಯಾಗಲು ಅದೊಂದೇ ಕಾರಣವಲ್ಲ. ಸೋಮವಾರ ಫೇಸ್​ಬುಕ್​ ಸ್ಟಾಕ್​ಗಳು ಶೇಕಡಾ 4.9 ರಷ್ಟು ಕುಸಿದವು. ಆದರೆ ಸ್ಟಾಕ್​ಗಳ ಕುಸಿತ ಕಳೆದ ತಿಂಗಳು ಮಧ್ಯಭಾಗದಿಂದಲೇ ಆರಂಭವಾಗಿ ಶೇಕಡಾ 15ರಷ್ಟು ಕುಸಿತ ಕಂಡಿವೆ ಎಂದು ಬ್ಲೂಮ್​ಬರ್ಗ್​​ ಬಿಲಿಯನ್ನೇರ್ಸ್ ಇಂಡೆಕ್ಸ್ ಹೇಳಿದೆ.

ಸೆಪ್ಟೆಂಬರ್ ಮತ್ತು ಸೋಮವಾರ ಕಂಡ ಕುಸಿತದ ಬಳಿಕ ಝಕರ್​​ಬರ್ಗ್​ ಅವರ ಸಂಪತ್ತು 121.6 ಮಿಲಿಯನ್ ಡಾಲರ್ ಆಗಿದೆ. ಅದರರ್ಥ ವಿಶ್ವದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ ಅವರು ಮೈಕ್ರೊಸಾಫ್ಟ್ ಬಿಲ್ ಗೇಟ್ಸ್​ಗಿಂತ ಒಂದು ಸ್ಥಾನ ಕೆಳಗಿಳಿದು 5ನೇ ಸ್ಥಾನಕ್ಕೆ ಜಾರಿದ್ದಾರೆ. ಕೆಲವೇ ವಾರಗಳ ಹಿಂದೆ ಝಕರ್​ಬರ್ಗ್​​ 140 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯರಾಗಿದ್ದರು.

ಇನ್ಸ್ಟಾಗ್ರಾಮ್​ನಲ್ಲಿ ಸಕ್ರಿಯರಾಗಿರುವ ಹದಿಹರೆಯದ ಬಾಲಕಿಯರಿಗೆ ಮಾನಸಿಕ ಸಮಸ್ಯೆಗಳು ಎದುರಾಗುತ್ತಿವೆ ಎಂಬ ಅಂಶವೂ ಸೇರಿದಂತೆ ತನ್ನ ಪ್ರಾಡಕ್ಟ್​ಗಳು ಹಲವಾರು ತೊಂದರೆಗಳನ್ನು ತೊಂದರೆ ಎದುರಿಸುತ್ತಿವೆ ಅನ್ನೋದು ಝಕರ್ಬರ್ಗ್ ಅವರಿಗೆ ಮೊದಲೇ ಗೊತ್ತಿತ್ತು ಎಂದು ವಾಲ್ ಸ್ಟ್ರೀಟ್ ಜರ್ನಲ್ ಕೆಲವು ವರದಿಗಳನ್ನು ಪ್ರಕಟಿಸಿದೆ. ಈ ವರದಿಗಳ ಬಗ್ಗೆ ಯುಎಸ್ ಸರ್ಕಾರಿ ಅಧಿಕಾರಿಗಳು ಗಮನ ಹರಿಸುತ್ತಿದ್ದಾರೆ.

ವಾಲ್ ಸ್ಟ್ರೀಟ್ ಜರ್ನಲ್ ನ ವರದಿಗಳಿಗೆ ಪ್ರತಿಕ್ರಿಯಿಸಿರುವ ಫೇಸ್​ಬುಕ್​, ರಾಜಕೀಯ ಧೃವೀಕರಣ ಸೇರಿದಂತೆ ತಾನು ಎದುರಿಸುತ್ತಿರುವ ಸಮಸ್ಯೆಗಳು ಸಂಕೀರ್ಣವಾಗಿದ್ದು ಅವು ಕೇವಲ ತಾಂತ್ರಿಕ ಹಿನ್ನೆಲೆಯಲ್ಲಿ ತಲೆದೋರಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ:  Video: ಲಖನೌಗೆ ಪ್ರಧಾನಿ ಮೋದಿ ಭೇಟಿ ಸುದ್ದಿ ಕೇಳಿ ವಿಡಿಯೋ ಬಿಡುಗಡೆ ಮಾಡಿ ‘ನೀವಿದನ್ನು ನೋಡಿದ್ದೀರಾ‘? ಎಂದ ಪ್ರಿಯಾಂಕಾ ಗಾಂಧಿ ವಾದ್ರಾ