ಕನ್ನಡ ಮಾತಾಡಲು ನಮ್ಮಲ್ಲಿ ಕೀಳರಿಮೆ ಬೇಡ, ಕನ್ನಡಿಗರೇ ಭಾಷೆಯನ್ನು ಅಸಡ್ಡೆ ಮಾಡುತ್ತಿದ್ದಾರೆ: ಲೂಸ್ ಮಾದ

ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ನಟ-ನಟಿಯರು ಸಿನಿಮಾ ಕುರಿತೇ ಮಾತಾಡುತ್ತಾರೆ. ಆದರೆ, ಮಾದ ಕನ್ನಡದ ಬಗ್ಗೆ ಮಾತಾಡಿದ್ದು ಗಮನ ಸೆಳೆಯಿತು.

ಕಾಲಮಾನ ಬಹಳ ಆಶ್ಚರ್ಯಕರ ರೀತಿಯಲ್ಲಿ ಬದಲಾಗುತ್ತಿದೆ. ಒಂದು ಸಿನಿಮಾ 25 ದಿನ ಓಡಿದರೂ ಅದನ್ನು ಆಚರಿಸುವಂಥ ದಿನಗಳು ಬಂದುಬಿಟ್ಟಿವೆ. ನಿಮಗೆ ಆಶ್ಚರ್ಯವಾಗಬಹುದು, ಒಂದು ಕನ್ನಡ ಚಿತ್ರ ರಿಲೀಸ್ ಆದ ಮರುದಿನ ಯಶಸ್ವೀ ಎರಡನೇ ದಿನ ಅಂತ ಪತ್ರಿಕೆಗಳಲ್ಲಿ ಜಾಹೀರಾತು ಹಾಕಿಕೊಂಡಿತ್ತು! ಮೊದಲಾದರೆ, ಚಿತ್ರ 50 ದಿನ ಇಲ್ಲವೇ 100 ದಿನ ಓಡಿದರೆ ಚಿತ್ರತಂಡ ಅದರ ಯಶಸ್ಸನ್ನು ಅದ್ದೂರಿಯಾಗಿ ಆಚರಿಸುತಿತ್ತು. ಕೋವಿಡ್-19 ನಮ್ಮ ಬದುಕಿನ ಹಲವಾರು ಆಯಾಮಗಳನ್ನು ಬದಲಿಸಿಬಿಟ್ಟಿದೆ ಅನ್ನೋದು ಸುಳ್ಳಲ್ಲ. ಇದನ್ನು ಯಾಕೆ ಹೇಳಬೇಕಾಗಿದೆ ಅಂದರೆ, ಲಂಕೆ ಸಿನಿಮಾ 25 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯ ಕಲಾವಿದರು-ಯೋಗೀಶ್ (ಲೂಸ್ ಮಾದ-ಈ ಹೆಸರಿನಿಂದಲೇ ಅವರು ಜನಪ್ರಿಯರು), ಕೃಷಿ ತಾಪಂಡ, ಕಾವ್ಯ ಶೆಟ್ಟಿ ಮತ್ತು ತಂತ್ರಜ್ಞರು ಮಂಗಳವಾರದಂದು ಸಿನಿಮಾದ ಬಗ್ಗೆ ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಟಿವಿ9ನೊಂದಿಗೆ ಹಂಚಿಕೊಂಡರು.

ಲಂಕೆ ಸಿನಿಮಾನಲ್ಲಿ ಲೂಸ್ ಮಾದ ಅವರ ನಟನೆ ಬಗ್ಗೆ ಭಾರಿ ಪ್ರಶಂಸೆಗಳು ಕೇಳಿ ಬರುತ್ತಿವೆ. ಅವರು ಪ್ರತಿಭಾವಂತ ಅನ್ನೋದರಲ್ಲಿ ಸಂಶಯವಿಲ್ಲ. ಈ ಸಿನಿಮಾ ವಿಶೇಷ ಅನ್ನೋದಿಕ್ಕೆ ಇನ್ನೊಂದು ಕಾರಣವೆಂದರೆ, ಇತ್ತೀಚಿಗೆ ನಿಧನರಾದ ಅಪ್ಟಟ ಪ್ರತಿಭಾವಂತ ಸಂಚಾರಿ ವಿಜಯ್ ಸಹ ಇದರಲ್ಲಿ ನಟಿಸಿದ್ದಾರೆ. ಲೂಸ್ ಮಾದ ಅವರು ಕನ್ನಡ ಭಾಷೆ ಬಗ್ಗೆ ಸ್ವಲ್ಪ ಅವೇಶದಲ್ಲಿ ಮಾತಾಡಿದರು. ಅವರು ಹೇಳಿರುವುದರಲ್ಲಿ ಸತ್ಯಾಂಶ ಅಡಗಿದೆ. ಭಾಷೆಯ ಬಗ್ಗೆ ಕನ್ನಡಿಗರಲ್ಲೇ ಅಸಡ್ಡೆ ಹೆಚ್ಚಾಗಿದೆ.

ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ನಟ-ನಟಿಯರು ಸಿನಿಮಾ ಕುರಿತೇ ಮಾತಾಡುತ್ತಾರೆ. ಆದರೆ, ಮಾದ ಕನ್ನಡದ ಬಗ್ಗೆ ಮಾತಾಡಿದ್ದು ಗಮನ ಸೆಳೆಯಿತು. ಕನ್ನಡಿಗರ ನಡುವೆಯೇ ಕನ್ನಡ ಭಾಷೆ ಪರಕೀಯವಾಗಿರುವ ಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಮಾತಾಡುವ ಭಾಷೆ ಕನ್ನಡವಾಗಿದ್ದರೂ ಬೇರೆ ಭಾಷೆಗಳಲ್ಲಿ ಮಾತಾಡುವವರನ್ನು ಕಂಡಾಗ ಕೋಪ ಉಕ್ಕುತ್ತದೆ ಎಂದು ಹೇಳಿದ ಅವರು ಕನ್ನಡ ಮಾತಾಡಲು ಜನರಿಗೆ ಯಾಕೆ ಕೀಳರಿಮೆ ಉಂಟಾಗುತ್ತದೆ ಅನ್ನೋದು ಅರ್ಥವಾಗದು ಅಂದರು.

ಇದನ್ನೂ ಓದಿ:  Viral Video: ಸಾರ್ವಜನಿಕ ಶೌಚಾಲಯದಿಂದ ಹೊರಬರುತ್ತಿರುವ ದೈತ್ಯ ಸಿಂಹವನ್ನು ನೋಡಿ ಬೆಚ್ಚಿಬಿದ್ದ ನೆಟ್ಟಿಗರು; ವಿಡಿಯೋ ವೈರಲ್​

Click on your DTH Provider to Add TV9 Kannada