‘ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!’: ಸ್ಫೋಟಕ ಮಾಹಿತಿ ಬಿಚ್ಚಟ್ಟ ಫೈರೋಜ್ ತಾಯಿ!

Edited By:

Updated on: Apr 11, 2026 | 12:45 PM

ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಫೈರೋಜ್ ಪಠಾಣ್​ನನ್ನು ಆತನ ಮನೆಗೇ ನುಗ್ಗಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಇನ್ನು 15 ದಿನಗಳಲ್ಲಿ ಮದುವೆಯಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ದುಃಖ ಮನೆಮಾಡಿದೆ. ಈ ಬಗ್ಗೆ ಫೈರೋಜ್ ತಾಯಿ ಮಾತನಾಡಿದ್ದು, ಮನೆಗೆ ಬಂದು ಕೊಲೆ ಮಾಡಿದ್ದು ಆತನ ಸ್ನೇಹಿತರೇ ಎಂಬ ಸತ್ಯ ಬಿಚ್ಚಿಟ್ಟಿದ್ದಾರೆ. ಮೃತನ ತಾಯಿ ಸೇರಿದಂತೆ ಇನ್ನೊಬ್ಬ ಯುವತಿಯ ಮೇಲೂ ಹಲ್ಲೆ ಮಾಡಿರುವ ಆರೋಪಿಗಳು ಎರಡು ಮೊಬೈಲ್​ಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ಫೈರೋಜ್​ನ ತಾಯಿ ಹೇಳಿದ್ದಾರೆ. ಅವನ ಮತ್ತು ಅವನ ಸ್ನೇಹಿತರ ನಡುವೆ ಯಾವ ಕಾರಣಕ್ಕೆ ವೈಷಮ್ಯವಿತ್ತು ಎಂದು ನಮಗೆ ತಿಳಿದಿಲ್ಲವೆಂದ ಆಕೆ, ಅವನ ಸ್ನೇಹಿತರು ಸರಿಯಿಲ್ಲ ಎಂದು ತಿಳಿಸಿದ್ದಾರೆ.

ಧಾರವಾಡ, ಏಪ್ರಿಲ್ 11: ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಫೈರೋಜ್ ಪಠಾಣ್​ನನ್ನು ಆತನ ಮನೆಗೇ ನುಗ್ಗಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಇನ್ನು 15 ದಿನಗಳಲ್ಲಿ ಮದುವೆಯಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ದುಃಖ ಮನೆಮಾಡಿದೆ. ಈ ಬಗ್ಗೆ ಫೈರೋಜ್ ತಾಯಿ ಮಾತನಾಡಿದ್ದು, ಮನೆಗೆ ಬಂದು ಕೊಲೆ ಮಾಡಿದ್ದು ಆತನ ಸ್ನೇಹಿತರೇ ಎಂಬ ಸತ್ಯ ಬಿಚ್ಚಿಟ್ಟಿದ್ದಾರೆ. ಮೃತನ ತಾಯಿ ಸೇರಿದಂತೆ ಇನ್ನೊಬ್ಬ ಯುವತಿಯ ಮೇಲೂ ಹಲ್ಲೆ ಮಾಡಿರುವ ಆರೋಪಿಗಳು ಎರಡು ಮೊಬೈಲ್​ಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ಫೈರೋಜ್​ನ ತಾಯಿ ಹೇಳಿದ್ದಾರೆ. ಅವನ ಮತ್ತು ಅವನ ಸ್ನೇಹಿತರ ನಡುವೆ ಯಾವ ಕಾರಣಕ್ಕೆ ವೈಷಮ್ಯವಿತ್ತು ಎಂದು ನಮಗೆ ತಿಳಿದಿಲ್ಲವೆಂದ ಆಕೆ, ಅವನ ಸ್ನೇಹಿತರು ಸರಿಯಿಲ್ಲ ಎಂದು ತಿಳಿಸಿದ್ದಾರೆ.

 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us