ಬೆಂಗಳೂರಿನ ಒಂದೇ ಕುಟುಂಬದ 25 ಸದಸ್ಯರು ಒಂದೇ ಮತಗಟ್ಟೆಯಲ್ಲಿ ಒಟ್ಟಿಗೆ ಮತದಾನ ಮಾಡಿದ ಅಪರೂಪದ ಸನ್ನಿವೇಶ!
ಕುಟುಂಬದ ಯಜಮಾನ ರಾಬರ್ಟ್ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾ ಕುಟುಂಬದಲ್ಲಿ ಐವರು ಪ್ರಥಮ ಬಾರಿಗೆ ವೋಟು ಮಾಡುವ ಹಕ್ಕು ಪಡೆದಿದ್ದಾರೆ ಎನ್ನುತ್ತಾರೆ. ಕುಟುಂಬದ ಹೊಸ ಅಥವಾ ಯುವ ಪೀಳಿಗೆಗೆ ಚುನಾವಣೆ ಮತ್ತು ಮತದಾನದ ಬಗ್ಗೆ ತನ್ನದೇಯಾದ ಆದ್ಯತೆ ಮತ್ತು ಅನಿಸಿಕೆಗಳಿವೆ.
ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮತ್ತು ಮತದಾನವನ್ನು ಒಂದು ಉತ್ಸವ ಅಂತ ಅಂದುಕೊಳ್ಳುವುದಾದರೆ ನಗರದ ಒಂದು ಕುಟುಂಬ ಆ ಉತ್ಸವವನ್ನು ಭರಪೂರ ಎಂಜಾಯ್ ಮಾಡಿದೆ. ದೃಶ್ಯಗಳಲ್ಲಿ ಕಾಣುತ್ತಿರುವುದು ರಾಬರ್ಟ್ ಅವರ 25-ಸದಸ್ಯರ ಕುಟುಂಬ! ಇದೊಂದು ಅವಿಭಾಜ್ಯ ಕುಟುಂಬವಾಗಿದ್ದು ಎಲ್ಲರೂ ಒಟ್ಟಿಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇದು ನಿಜಕ್ಕೂ ಅಪರೂಪದ ಸಂಗತಿ. ರಾಬರ್ಟ್ ಫ್ಯಾಮಿಲಿಗಿಂತ ದೊಡ್ಡ ಅವಿಭಾಜ್ಯ ಕುಟುಂಬಗಳು ಇರಬಹುದು, ಅದರೆ ಹೀಗೆ ಒಟ್ಟಿಗೆ ಒಂದೇ ಕುಟುಂಬದ 25 ಅರ್ಹ ಮತದಾರರು ಒಂದೇ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದು ಹೆಚ್ಚು ಸಂದರ್ಭಗಳಲ್ಲಿ ನಡೆದಿರಲಿಕ್ಕಿಲ್ಲ. ಟಿವಿ9 ಬೆಂಗಳೂರು ವರದಿಗಾರ ರಾಬರ್ಟ್ ಕುಟುಂಬದೊಂದಿಗೆ ಮಾತಾಡಿದ್ದಾರೆ. ಕುಟುಂಬದ ಯಜಮಾನ ರಾಬರ್ಟ್ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾ ಕುಟುಂಬದಲ್ಲಿ ಐವರು ಪ್ರಥಮ ಬಾರಿಗೆ ವೋಟು ಮಾಡುವ ಹಕ್ಕು ಪಡೆದಿದ್ದಾರೆ ಎನ್ನುತ್ತಾರೆ. ಕುಟುಂಬದ ಹೊಸ ಅಥವಾ ಯುವ ಪೀಳಿಗೆಗೆ ಚುನಾವಣೆ ಮತ್ತು ಮತದಾನದ ಬಗ್ಗೆ ತನ್ನದೇಯಾದ ಆದ್ಯತೆ ಮತ್ತು ಅನಿಸಿಕೆಗಳಿವೆ. ಎಲ್ಲ 25 ಜನರಲ್ಲಿ ವೋಟು ಮಾಡುವ ತುಡಿತವಿದ್ದಿದ್ದು ನಮಗೆ ಹೆಚ್ಚು ಖುಷಿ ನೀಡುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಮಂಜುನಾಥ್ ಆಸ್ತಿ ಘೋಷಣೆ: ಪತ್ನಿಯೇ ಶ್ರೀಮಂತೆ, ಡಾಕ್ಟರ್ಗೆ ಪುಸ್ತಕಗಳೇ ಆಸ್ತಿ!