ಬಿಜೆಪಿ ಅಭ್ಯರ್ಥಿ ಮಂಜುನಾಥ್ ಆಸ್ತಿ ಘೋಷಣೆ: ಪತ್ನಿಯೇ ಶ್ರೀಮಂತೆ, ಡಾಕ್ಟರ್​ಗೆ ಪುಸ್ತಕಗಳೇ ಆಸ್ತಿ!

Dr CN Manjunath Total Asset,: ಖ್ಯಾತ ವೈದ್ಯ, ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ,ಸಿಎನ್ ಮಂಜುನಾಥ್ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇಂದು (ಏಪ್ರಿಲ್ 04) ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇನ್ನು ನಾಮಪತ್ರದಲ್ಲಿ ತಮ್ಮ ಒಟ್ಟು ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದು, ಮಂಜುನಾಥ್​ನವರಿಗಿಂತ ಅವರ ಪತ್ನಿಯೇ ಶ್ರೀಮಂತೆಯಾಗಿರುವುದು ವಿಶೇಷ. ಇನ್ನು ಪುಸ್ತಕಗಳು ಸಹ ನನ್ನ ಆಸ್ತಿ ಪಟ್ಟಿಯಲ್ಲಿವೆ ಹಾಗಾದ್ರೆ, ಮಂಜುನಾಥ್ ಅವರ ಆಸ್ತಿ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.

ಬಿಜೆಪಿ ಅಭ್ಯರ್ಥಿ ಮಂಜುನಾಥ್ ಆಸ್ತಿ ಘೋಷಣೆ: ಪತ್ನಿಯೇ ಶ್ರೀಮಂತೆ, ಡಾಕ್ಟರ್​ಗೆ ಪುಸ್ತಕಗಳೇ ಆಸ್ತಿ!
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Apr 04, 2024 | 8:48 PM

ಬೆಂಗಳೂರು, (ಏಪ್ರಿಲ್ 04): ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಅವರ ಅಳಿಯ ಖ್ಯಾತ ವೈದ್ಯ ಡಾ.ಸಿಎನ್​ ಮಂಜುನಾಥ್ ಅವರುಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು(ಏಪ್ರಿಲ್ 04) ನಾಮಪತ್ರ ಸಲ್ಲಿಸಿದರು. ತಮ್ಮ ಅಪಾರ ಬೆಂಬಲಿಗರೊಂದಿಗೆ ತೆರಳಿ ರಾಮನಗರ ಜಿಲ್ಲಾಧಿಕಾರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಇನ್ನು ನಾಮಪತ್ರದ ಅಫಿಡೆವಿಟ್​ನಲ್ಲಿ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದು,  ಇದರಲ್ಲಿ ಪುಸ್ತಕಗಳು ಸಹ ತಮ್ಮ ಆಸ್ತಿ ಪಟ್ಟಿಯಲ್ಲಿದೆ ಮಾಹಿತಿ ನೀಡಿರುವುದು ವಿಶೇಷವಾಗಿದೆ.  ತಮ್ಮ ಹೆಸರಿನಲ್ಲಿ 43.63 ಕೋಟಿ ರೂ. ಮತ್ತು ಪತ್ನಿ ಅನುಸೂಯ ಅವರ ಆಸ್ತಿ ಮೌಲ್ಯ 52.66 ಕೋಟಿ ರೂ. ಇದೆ ಎಂದು ಮಂಜುನಾಥ್ ತಿಳಿಸಿದ್ದಾರೆ.  ಈ ದಂಪತಿ ಒಟ್ಟು 96.29 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಇನ್ನು ಮಂಜುನಾಥ್ ಅವರಿಗಿಂತ ಅವರ ಪತ್ನಿ ಅನುಸೂಯ ಅವರೇ ಶ್ರೀಮಂತರಾಗಿದ್ದಾರೆ.

ಡಾ.ಮಂಜುನಾಥ್ ಅವರ ಹೆಸರಿನಲ್ಲಿ 43.63 ಕೋಟಿ ರೂ ಆಸ್ತಿ ಇದ್ದರೆ, ಅವರ ಪತ್ನಿ ದೇವೇಗೌಡ ಅವರ ಪುತ್ರಿ ಅನುಸೂಯ ಅವರು 52.66 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಇದರೊಂದಿಗೆ ಈ ದಂಪತಿಯ ಒಟ್ಟು ಆಸ್ತಿ ಮೌಲ್ಯ 96.29 ಕೋಟಿ ರೂಪಾಯಿ ಇದೆ. ಡಾ. ಮಂಜುನಾಥ್ ಅವರು 6.98 ಕೋಟಿ ರೂ. ಚರಾಸ್ಥಿ, 36.65 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಆನುಸೂಯ ಅವರು 17.36 ಕೋಟಿ ರೂ. ಚರಾಸ್ತಿ, 35.30 ಕೋಟಿ ರೂ ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನು ಇವರ ಅವಿಭಕ್ತ ಕುಟುಂಬದ ಹೆಸರಿನಲ್ಲಿ 5 ಲಕ್ಷ ರೂ. ಸಾಲ ಇದೆ. ಡಾ. ಮಂಜುನಾಥ್ ಅವರ ಹೆಸರಿನಲ್ಲಿ 3 ಕೋಟಿ ರೂ. ಸಾಲ ಇದೆ. ಹಾಗೇ ಪತ್ನಿ ಅನುಸೂಯ ಅವರು 11 ಕೋಟಿ ರೂ. ಸಾಲ ಹೊಂದಿರುವುದಾಗಿ ಡಾ. ಸಿಎನ್ ಮಂಜುನಾಥ್ ಅವರು ತಮ್ಮ ಅಫಿಡೆವಿಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ದಂಪತಿ ಬಳಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ, ಇನ್ನು ಆಸ್ತಿ ಎಷ್ಟಿದೆ ಗೊತ್ತಾ?

ಮಂಜುನಾಥ್ ಪತ್ನಿ ಬಳಿ ಕೇಜಿಗಟ್ಟಲೇ ಚಿನ್ನ

ಡಾ.ಮಂಜುನಾಥ್ ಬಳಿ ಒಂದು ಮರ್ಸಿಡೀಸ್ ಬೆಂಜ್ ಕಾರು, ಒಂದು ಹುಂಡೈ ವರ್ನಾ, ಕಾರು ಇದ್ದರೆ, ಇವರ ಪತ್ನಿಯ ಬಳಿ ಮಾರುತಿ ಸಿಯಾಜ್ ಕಾರು ಇದೆ. ಡಾ.ಮಂಜುನಾಥ್ ಹೆಸರಿನಲ್ಲಿ ಯಾವುದೇ ಚಿನ್ನಾರಣ ಇಲ್ಲ. ಆದ್ರೆ, ಪತ್ನಿ ಅನುಸೂಯ ಅವರ ಬಳಿ 5 ಕೆಜಿ ಚಿನ್ನಾಭರಣ, 1ಕೆಜಿ ಚಿನ್ನದ ಗಟ್ಟಿ ಹೊಂದಿದ್ದು, 51 ಕ್ಯಾರೇಟ್ ವಜ್ರ ಇದೆ. ಹಾಗೇ 340 ಗ್ರಾಂ ಬೆಲೆ ಬಾಳುವ ಹರಳುಗಳು ಮತ್ತು 25 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಹಾಗೇ ಅನುಸೂಯ ಮಂಜುನಾಥ್ ಹೆಸರಿನಲ್ಲಿ 4 ವಾಸದ ಮನೆಗಳು ಇದ್ದರೆ, ಡಾ.ಮಂಜುನಾಥ್ ಹೆಸರಿನಲ್ಲಿ ಯಾವುದೇ ಮನೆ ಇಲ್ಲ.

ಕುಟುಂಬದವರಿಗೆ ಸಾಲ

ಡಾ.ಮಂಜುನಾಥ್ ಅವರು ಅನಿತಾ ಕುಮಾರಸ್ವಾಮಿಗೆ 7.50 ಲಕ್ಷ ರೂ., ಪುತ್ರ ಸಾತ್ವಿಕ್​ಗೆ 99.83 ಲಕ್ಷ ರೂ. ಪುತ್ರಿ ನಮ್ರತಾಗೆ 1.31 ಕೋಟಿ ರೂ., ಪತ್ನಿ ಅನುಸೂಯಗೆ 2.32 ಕೋಟಿ ರೂ. ಸಾಲ ನೀಡಿದ್ದಾರೆ. ಇನ್ನು ಅನುಸೂಯ ಮಂಜುನಾಥ್ ಸಹ ಕುಟುಂಬದವರಿಗೆ ಸಾಲ ನೀಡಿದ್ದು, ಅಣ್ಣನ ಮಗ ಸೂರಜ್‌ಗೆ 7.50 ಲಕ್ಷ ರೂ. ಪ್ರಜ್ವಲ್ ರೇವಣ್ಣಗೆ 22 ಲಕ್ಷ ರೂ. ಪುತ್ರ ಸಾತ್ವಿಕ್‌ಗೆ 62.88 ಲಕ್ಷ ರೂ. ಪುತ್ರಿ ನಮ್ರತಾಗೆ 2.50 ಕೋಟಿ ರೂ., ತಾಯಿ ಚನ್ನಮ್ಮಗೆ 19.20 ಲಕ್ಷ ರೂ. ಸಾಲ ನೀಡಿದ್ದಾರೆ.

ಪುಸ್ತಕಗಳೇ ವಿಶೇಷ..

ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ 100 ಪುಸ್ತಕ, 125 ಕನ್ನಡ ಸಾಹಿತ್ಯ ಪುಸ್ತಕ ನನ್ನ ಆಸ್ತಿ ಪಟ್ಟಿಯಲ್ಲಿದೆ ಎಂದು ಡಾ.ಮಂಜುನಾಥ್ ಘೋಷಣೆ ಮಾಡಿಕೊಂಡಿರುವುದು ವಿಶೇಷ.

Published On - 7:56 pm, Thu, 4 April 24

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ