ಜಿಲ್ಲಾಧಿಕಾರಿಗಳ ಕಚೇರಿ ಬಳಿ ನೆರೆದಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಸುರೇಶ್ ಎದುರು ಮೋದಿ ಮೋದಿ ಎಂದು ಕೂಗಿದರು
ಆದರೆ, ಅವರು ಹೊರಬರುವಾಗ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನೆರೆದಿದ್ದ ನೂರಾರು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಎದುರಾಗುತ್ತಾರೆ. ಸುರೇಶ್ ಕಾರು ತಮ್ಮನ್ನು ಸಮೀಸುತ್ತಿದ್ದಂತೆಯೇ ಅವರು ‘ಮೋದಿ ಮೋದಿ’ ಅಂತ ಘೋಷಣೆಗಳನ್ನು ಕೂಗುತ್ತಾರೆ. ಸುರೇಶ್ ತಮ್ಮ ಪಾಡಿಗೆ ತಾವು ಕಾರಲ್ಲಿ ಹೋಗುವುದನ್ನು ನೋಡಬಹುದು.
ರಾಮನಗರ: ತಾನು ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇಂಥದೊಂದು ಸನ್ನಿವೇಶ ಸೃಷ್ಟಿಯಾದೀತು ಅಂತ ಸಂಸದ ಡಿಕೆ ಸುರೇಶ್ (DK Suresh) ಭಾವಿಸಿರಲಿಕ್ಕಿಲ್ಲ. ಆದರೆ ಇದು ಚುನಾವಣಾ ಸಮಯದ ರಾಜಕೀಯ ಮಾರಾಯ್ರೇ, ಈಗ ಹಿಂದೆ ನೋಡಲಾರದ ದೃಶ್ಯಗಳನ್ನು ಸಹ ನೋಡಬಹುದು. ಇವತ್ತು ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ (Ramanagara DC office) ಕಾಂಗ್ರೆಸ್ ಪಕ್ಷದ ಉಮೇದುವಾರನಾಗಿ ನಾಮಪತ್ರ ಸಲ್ಲಿಸಿದ ನಂತರ ಸುರೇಶ್, ಸಂತೋಷ ಮತ್ತು ಉತ್ಸಾಹದಿಂದ ಹೊರಬಂದರು. ಅವರೊಂದಿಗೆ ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸ್ಸೇನ್ (Iqbal Hussain) ಇದ್ದರು. ಕಾರು ಹತ್ತುವ ಮೊದಲು ಸುರೇಶ್ ತಮ್ಮ ಬಲಭಾಗದಲ್ಲಿ ಕಟ್ಟಡದ ಮೇಲೆ ನಿಂತಿದ್ದ ಜನರತ್ತ ನಗುತ್ತಾ ಕೈ ಬೀಸುತ್ತಾರೆ. ಆದರೆ, ಅವರು ಹೊರಬರುವಾಗ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನೆರೆದಿದ್ದ ನೂರಾರು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಎದುರಾಗುತ್ತಾರೆ. ಸುರೇಶ್ ಕಾರು ತಮ್ಮನ್ನು ಸಮೀಸುತ್ತಿದ್ದಂತೆಯೇ ಅವರು ‘ಮೋದಿ ಮೋದಿ’ ಅಂತ ಘೋಷಣೆಗಳನ್ನು ಕೂಗುತ್ತಾರೆ. ಸುರೇಶ್ ತಮ್ಮ ಪಾಡಿಗೆ ತಾವು ಕಾರಲ್ಲಿ ಹೋಗುವುದನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ:Lok Sabha elections: ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಾಕ್ಸರ್ ವಿಜೇಂದರ್ ಸಿಂಗ್