ಹೊಸ ವರ್ಷ ಸಂಭ್ರಮ; ಗದಗಿನ ಬೇಕರಿಯೊಂದರಲ್ಲಿ ಬಗೆಬಗೆಯ ಕೇಕ್​ಗಳು, ಆದರೆ ಗ್ರಾಹಕರು ಕಡಿಮೆ

ಅರುಣ್​ ಕುಮಾರ್​ ಬೆಳ್ಳಿ

Updated on: Dec 31, 2024 | 5:29 PM

ಬೇಕರಿಯ ಮಾಲೀಕ ಟಿವಿ9 ವರದಿಗಾರನೊಂದಿಗೆ ಒಲ್ಲದ ಮನಸ್ಸಿನಿಂದ ಮಾತಾಡಿದ್ದು ಹೋದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೇಕ್ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆದಾಗ್ಯೂ ಸಾಯಂಕಾಲದ ಸಮಯದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಬಹುದೆಂಬ ನಿರೀಕ್ಷೆಯನ್ನು ಅವರು ಇಟ್ಟುಕೊಂಡಿದ್ದಾರೆ. ಇದು ತಿಂಗಳು ಕೊನೆ ನಿಜ ಆದರೆ ಜನ ಹೊಸ ವರ್ಷದ ಆಚರಣೆಗಾಗಿ ಹಣವನ್ನು ತೆಗೆದಿಟ್ಟಿರುತ್ತಾರೆ.

ಗದಗ: ರಾತ್ರಿ 12 ಗಂಟೆಯಾಗುತ್ತಿದ್ದಂತೆಯೇ ಕೇಕ್ ಕಟ್ ಮಾಡಿ ಹೊಸವರ್ಷವನ್ನು ಸ್ವಾಗತಿಸುವುದು ಒಂದು ಸಂಪ್ರದಾಯವಾಗಿ ಬಿಟ್ಟಿದೆ. ಹಾಗಾಗಿ ರಾಜ್ಯದೆಲ್ಲೆಡೆ ಕೇಕ್​ಗಳಿಗೆ ಭಾರೀ ಬೇಡಿಕೆ. ಗದಗ ನಗರದ ಸಾಸನೂರು ಬೇಕರಿಯಲ್ಲಿ ಬಗೆಬಗೆಯ ಕೇಕ್​ಗಳನ್ನು ತಯಾರಿಸಿಡಲಾಗಿದೆ ಮತ್ತು ಗ್ರಾಹಕರು ತಮಗಿಷ್ಟವಾದ ಕೇಕನ್ನು ಖರೀದಿಸಿ ಮನೆಗೆ ಒಯ್ಯುತ್ತಿದ್ದಾರೆ. ನಮ್ಮ ಗದಗ ವರದಿಗಾರ ಬೇಕರಿಯಲ್ಲಿ ತಯಾರಾಗಿರುವ ಕೇಕ್​ಗಳ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಮಕ್ಕಳಿಗಾಗಿ ತಯಾರಿಸಿರುವ ಕೇಕ್​ಗಳು ಸಾಕಷ್ಟು ಸಂಖ್ಯೆಯಲ್ಲಿ ಬೇಕರಿಯಲ್ಲಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೊಸವರ್ಷ ಸಂಭ್ರಮಾಚರಣೆಯ ಭರದಲ್ಲಿ ನಿಮಗಾಗಿ ಮನೆಯಲ್ಲಿ ಕಾಯುತ್ತಿರುವ ಜನರನ್ನು ಮರೆಯಬೇಡಿ: ಜಾಹ್ನವಿ, ಡಿಸಿಪಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.