ಅಳುತ್ತಾ ಬಂದು ದರ್ಶನ್​ ಕಾಲಿಗೆ ಬಿದ್ದ ಯುವತಿ; ಹೇಗಿತ್ತು ನೋಡಿ ಡಿ ಬಾಸ್​ ಪ್ರತಿಕ್ರಿಯೆ?

|

Updated on: Apr 18, 2024 | 8:53 PM

ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾದ ಸ್ಟಾರ್​ ಚಂದ್ರು (ವೆಂಕಟರಮಣೇಗೌಡ) ಪರವಾಗಿ ದರ್ಶನ್​ ಅವರು ಮತ ಕೇಳುತ್ತಿದ್ದಾರೆ. ಜಿಲ್ಲೆಯ ಹಲವು ಊರುಗಳಿಗೆ ಭೇಟಿ ನೀಡಿ ಅವರು ಪ್ರಚಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್​ ಅವರನ್ನು ನೋಡಲು ಒಂದು ಯುವತಿಯೊಬ್ಬಳು ಸಿಕ್ಕಾಪಟ್ಟೆ ಎಮೋಷನಲ್​ ಆಗಿದ್ದಾಳೆ. ಆಕೆಯನ್ನು ಸಮಾಧಾನ ಮಾಡಿದ ದರ್ಶನ್​ ಅವರು ತುಂಬ ಕೂಲ್​ ಆಗಿ ಪ್ರತಿಕ್ರಿಯಿಸಿದ್ದಾರೆ.

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ (Darshan) ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಈಗ ಅವರು ಮಂಡ್ಯ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್​ ಚಂದ್ರು (Star Chandru) ಪರವಾಗಿ ದರ್ಶನ್​ ಮತ ಕೇಳುತ್ತಿದ್ದಾರೆ. ವಿವಿಧ ಗ್ರಾಮಗಳಿಗೆ ತೆರಳಿ ಅವರು ಕ್ಯಾಂಪೇನ್​ ನಡೆಸುತ್ತಿದ್ದಾರೆ. ಈ ವೇಳೆ ಅವರನ್ನು ನೋಡಲು ಜನಸಾಗರವೇ ಸೇರುತ್ತಿದೆ. ಇಂದು (ಏಪ್ರಿಲ್​ 18) ಮಂಡ್ಯದಲ್ಲಿ ದರ್ಶನ್​ ಅವರು ಪ್ರಚಾರ ಮಾಡುವಾಗ ಯುವತಿಯೊಬ್ಬಳು ಕಣ್ಣೀರು ಹಾಕುತ್ತಾ ಓಡಿಬಂದಿದ್ದಾಳೆ. ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದಕ್ಕೆ ಯುವತಿ ಎಮೋಷನಲ್​ ಆಗಿದ್ದಾಳೆ. ಅಲ್ಲದೇ ಡಿ ಬಾಸ್​ (D Boss) ಕಾಲಿಗೆ ಬಿದ್ದು ಅಭಿಮಾನ ಪ್ರದರ್ಶಿಸಿದ್ದಾಳೆ. ಎಮೋಷನಲ್​ ಆಗಿದ್ದ ಯುವತಿಯನ್ನು ದರ್ಶನ್​ ಸಮಾಧಾನ ಮಾಡಿದ್ದಾರೆ. ‘ಮೊದಲಿಗೆ ಈಕೆಗೆ ನೀರು ಕೊಡಿ’ ಎಂದು ದರ್ಶನ್ ಹೇಳಿದ್ದಾರೆ. ಆ ಜನಜಂಗುಳಿಯ ನಡುವೆಯೂ ತುಂಬ ತಾಳ್ಮೆಯಿಂದ ಫೋಟೋಗೆ ಪೋಸ್​ ನೀಡಿದ್ದಾರೆ. ‘ಚೆನ್ನಾಗಿ ಓದಬೇಕು’ ಎಂದು ಆಕೆಗೆ ಕಿವಿಮಾತು ಕೇಳಿ ಕಳಿಸಿದ್ದಾರೆ. ಕೈ ನೋವಿನ ನಡುವೆಯೂ ದರ್ಶನ್​ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.